ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-03-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ತನ್ನ ಕುಟುಂಬದವರು ಕಷ್ಟದಲ್ಲಿರುವಾಗ ಕೀರ್ತಿಗೋಸ್ಕರ ದಾನ-ಧರ್ಮಗಳನ್ನು ಮಾಡುವುದು ಧರ್ಮವಲ್ಲ, ಧರ್ಮದಂತೆ ಇರುತ್ತದೆ. ಇದರ ಆರಂಭವು ಚೆನ್ನಾಗಿದ್ದು ಕೊನೆಗೆ ದುಃಖವನ್ನು ತಂದೊಡ್ಡುತ್ತದೆ. – ಮನುಸ್ಮೃತಿ

Rashi

ಪಂಚಾಂಗ : ಸೋಮವಾರ, 27.03.2017

ಸೂರ್ಯ ಉದಯ ಬೆ.06.19 / ಸೂರ್ಯ ಅಸ್ತ ಸಂ.06.31
ಚಂದ್ರ ಅಸ್ತ ಸಂ.05.56 / ಚಂದ್ರ ಉದಯ ನಾ.ಬೆ.06.26
ದುರ್ಮುಖಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ
ಕೃಷ್ಣ ಪಕ್ಷ / ತಿಥಿ : ಚತುರ್ದಶಿ (ಬೆ.10.45) / ನಕ್ಷತ್ರ: ಪೂರ್ವಾಭಾದ್ರ (ಮ.03.20)
ಯೋಗ: ಶುಕ್ಲ (ರಾ.09.24) / ಕರಣ: ಶಕುನಿ-ಚತುಷ್ಪಾದ (ಬೆ.10.45-ರಾ.09.40)
ಮಳೆ ನಕ್ಷತ್ರ: ಉತ್ತರಾಭಾದ್ರ / ಮಾಸ: ಮೀನ / ತೇದಿ: 14

ರಾಶಿ ಭವಿಷ್ಯ :

ಮೇಷ : ಆದಾಯಕ್ಕೆ ಕೊರತೆ ಇಲ್ಲವಾದರೂ ಅಧಿಕ ಖರ್ಚು-ವೆಚ್ಚಗಳಿವೆ, ಲೆಕ್ಕಾಚಾರ ಸರಿ ಇರಲಿ
ವೃಷಭ : ನ್ಯಾಯಾಲಯದ ವಿಷಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ, ನಾನಾ ರೀತಿಯಲ್ಲಿ ಧನ ಸಂಗ್ರಹವಾಗಲಿದೆ
ಮಿಥುನ: ವಿಲಾಸ ಜೀವನದಿಂದ ಸಂತೃಪ್ತಿ ಇರುತ್ತದೆ
ಕಟಕ : ಕೆಟ್ಟ ಮಾತುಗಳು ಬೇಸರ ತಂದರೂ ನಿಮಗೆ ವಹಿಸಿದ ಕಾರ್ಯ ಗಳನ್ನು ಪೂರ್ಣಗೊಳಿಸುವಿರಿ
ಸಿಂಹ: ಸಾಂಸಾರಿಕವಾಗಿ ಪುತ್ರ ವಿರೋಧ ಬೇಸರಕ್ಕೆ ಕಾರಣವಾಗಲಿದೆ
ಕನ್ಯಾ: ಮನೆಗೆ ಆಪ್ತರ ಆಗಮನ ದಿಂದ ಸಂತಸ ಉಂಟಾಗಲಿದೆ
ತುಲಾ: ಹೊಸ ಸಂಬಂಧಗಳು ಅವಿವಾಹಿತರಿಗೆ ಜೋಡಣೆಯಾಗಲಿದೆ
ವೃಶ್ಚಿಕ :ವೃತ್ತಿರಂಗದಲ್ಲಿ ಸ್ಥಾನ ಮಾನ ಉನ್ನತ ಮಟ್ಟಕ್ಕೇರಲಿದೆ
ಧನುಸ್ಸು: ಗುರು-ಹಿರಿಯರ ಆಶೀರ್ವಾದದಿಂದ ಸಮಾ ಧಾನ ಸಿಗಲಿದೆ, ದೂರ ಸಂಚಾರದಿಂದ ಕಾರ್ಯಸಿದ್ಧಿ
ಮಕರ: ಆಕಸ್ಮಿಕ ವಾಹನ-ಅಪಘಾತಕ್ಕೆ ಕಾರಣರಾಗದಿರಿ
ಕುಂಭ: ಅವಿವಾಹಿತರು ವೈವಾಹಿಕ ಭಾಗ್ಯ ಹೊಂದಲಿದ್ದಾರೆ
ಮೀನ: ಕೆಲಸ-ಕಾರ್ಯಗಳಲ್ಲಿ ಒತ್ತಡಗಳಿದ್ದರೂ ಜಾಗ್ರತೆಯಿಂದ ನಿರ್ವಹಿಸುವುದು ಒಳ್ಳೆಯದು


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin