ಭಿಕ್ಷಕರಿಗೆ ಪುನರ್ವಸತಿ ಕಲ್ಪಿಸಲು ಕ್ರಮ : ಎಚ್.ಆಂಜನೇಯ

ಈ ಸುದ್ದಿಯನ್ನು ಶೇರ್ ಮಾಡಿ

Beggars--01


ಬೆಂಗಳೂರು, ಮಾ.27
– ಭಿಕ್ಷಾಟನೆ ನಿರ್ಮೂಲನೆಗಾಗಿ ರಾಜ್ಯದಲ್ಲಿ ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯ್ದೆಯಡಿ ಹಲವು ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ವಿಧಾನಪರಿಷತ್‍ಗೆ ತಿಳಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಆರ್.ಧರ್ಮಸೇನಾ ಹಾಗೂ ಕೆ.ಸಿ.ಕೊಂಡಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಎಳೆ ಮಕ್ಕಳೊಂದಿಗೆ ಭಿಕ್ಷೆ ಬೇಡುವ ಮಹಿಳೆಯರು, ಮಂಗಳಮುಖಿಯರನ್ನು ನಿಯಂತ್ರಿಸಲು ಸಮಾಜ ಕಲ್ಯಾಣ ಇಲಾಖೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಚರ್ಚಿಸಿ ಪುನರ್ವಸತಿ ಕಲ್ಪಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.

ಎಳೆಯ ಮಕ್ಕಳೊಂದಿಗಿರುವ ಮಹಿಳೆಯರನ್ನು ಹಾಗೂ ಮಂಗಳ ಮುಖಿಯರನ್ನು ಬಂಧಿಸುವಂತಿಲ್ಲ. ಅವರ ಮನಃ ಪರಿವರ್ತನೆ ಮಾಡುವ ಕೆಲಸವನ್ನು ಮಾಡುತ್ತಿದ್ದೇವೆ. ಆಪರೇಷನ್ ಸ್ಮೈಲ್, ಆಪರೇಷನ್ ಮುಸ್ಕಾನ್ ಎಂಬ ಕಾರ್ಯಾಗಾರಗಳನ್ನು ರೂಪಿಸಿ ಬಿಕ್ಷೆ ಬೇಡುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ. ಹಲವರನ್ನು ರಕ್ಷಣೆ ಮಾಡಿ ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಲಾಗಿದೆ.  ಈ ಕೇಂದ್ರಗಳಲ್ಲಿ ಅವರ ಜೀವನೋಪಾಯಕ್ಕೆ ಬೇಕಾದ ಕೆಲಸಗಳ ತರಬೇತಿ ನೀಡಲಾಗುತ್ತದೆ. ಮಂಗಳ ಮುಖಿಯರಿಗಾಗಿ ಯಾವುದೇ ಪುನರ್ವಸತಿ ಕೇಂದ್ರಗಳು ಇರುವುದಿಲ್ಲ.ಅವರಿಗೂ ಪುನರ್ವಸತಿ ಕೇಂದ್ರಗಳ ಸ್ಥಾಪನೆಗೆ ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin