ಮೈಸೂರು ಅರಮನೆಯಲ್ಲಿನ 3 ಸಾಕಾನೆಗಳು ಅರಣ್ಯ ಇಲಾಖೆ ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Mysuru-Palce--1

ಮೈಸೂರು, ಮಾ.27-ಮೈಸೂರು ಅರಮನೆಯಲ್ಲಿನ ಸಾಕು ಆನೆಗಳ ನಿರ್ವಹಣೆ ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ 3 ಆನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆಯಲು ಮುಂದಾಗಿದ್ದಾರೆ.  ರಾಜವಂಶಸ್ಥ್ಥೆ ಪ್ರಮೋದಾದೇವಿ ಒಡೆಯರ್ ಅವರ ಮನವಿ ಮೇರೆಗೆ 6 ಆನೆಗಳ ಪೈಕಿ 3 ಆನೆಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.  ಕಳೆದ 20 ವರ್ಷಗಳ ಹಿಂದೆ ಜರ್ಮನಿ ಸರ್ಕಸ್ ಕಂಪೆನಿಯಿಂದ ರಾಜ್ಯ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ರಾಜೇಶ್ವರಿ, ಜೆಮಿನಿ, ರೂಬಿ, ಚಂಚಲ, ಸೀತಾ ಹಾಗೂ ಗೀತಾ ಎಂಬ ಆನೆಗಳನ್ನು ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಆಗ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಆನೆಗಳನ್ನು ಅರಮನೆಯಲ್ಲಿಯೇ ಸಾಕುತ್ತಿದ್ದರು.

ಈ ಆನೆಗಳನ್ನು ನಿರ್ವಹಣೆ ಮಾಡಲು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಆನೆಗಳನ್ನು ಹಿಂಪಡೆಯಬೇಕೆಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.  ಈ ಹಿನ್ನೆಲೆಯಲ್ಲಿ ಆರು ಆನೆಗಳ ಪೈಕಿ ರೂಬಿ, ರಾಜೇಶ್ವರಿ, ಜೆಮಿನಿ ಈ ಆನೆಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದು ಆನೆ ಕ್ಯಾಂಪ್‍ಗೆ ಕಳುಹಿಸಲು ಮುಂದಾಗಿದ್ದಾರೆ.  ಉಳಿದ ಮೂರು ಆನೆಗಳನ್ನು ತಾವೇ ಸಾಕುವುದಾಗಿ ಪ್ರಮೋದಾ ದೇವಿ ಒಡೆಯರ್ ಅವರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin