ವಿಧಾನಪರಿಷತ್‍ಗೆ ವಿಕಲಚೇತನ ಪ್ರತಿನಿಧಿ ನೇಮಿಸುವಂತೆ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

Parishat--01

ಬೆಂಗಳೂರು, ಮಾ.27-ವಿಧಾನಪರಿಷತ್ತಿಗೆ ವಿಕಲಚೇತನ ಪ್ರತಿನಿಧಿಯನ್ನು ನೇಮಿಸಬೇಕು ಹಾಗೂ ಸರ್ಕಾರಿ ವಿಕಲಚೇತನ ನೌಕರರಿಗೆ ಸುಪ್ರೀಂಕೋರ್ಟ್‍ನ ಆದೇಶದಂತೆ ಶೇ.3 ರಷ್ಟು ಬಡ್ತಿ ಮಿಸಲಾತಿ ಆದೇಶವನ್ನು ಶೀಘ್ರವೇ ಜಾರಿಗೊಳಿಸುವಂತೆ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಚಿಲವಾಡಗಿ ಒತ್ತಾಯಿಸಿದ್ದಾರೆ.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಕಲಚೇತನರ ಸಮಸ್ಯೆಗಳನ್ನು ಹಾಗೂ ಬೇಡಿಕೆಗಳ ಕುರಿತು ಚರ್ಚೆ ನಡೆಸಲು ವಿಧಾನ ಪರಿಷತ್ತಿಗೆ ಒಬ್ಬ ವಿಕಲಚೇತನರನ್ನು ವಿಕಲಚೇತನರ ಪರವಾಗಿ ನಾಮನಿರ್ದೇಶನ ಮಾಡಬೇಕು ಎಂದರು.

ರಾಜ್ಯದಲ್ಲಿ 2011 ರ ಸಮೀಕ್ಷೆಯ ಪ್ರಕಾರ ಸುಮಾರ 13 ಲಕ್ಷ ವಿಕಲಚೇತನರು ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ.ಆದರೆ ಅದು ತಪ್ಪಾದ ಮಾಹಿತಿಯಾಗಿದೆ. ರಾಜ್ಯದಲ್ಲಿ ಸುಮಾರು 30 ಲಕ್ಷ ವಿಕಲಚೇತನರಿದ್ದೇವೆ. ಆದ್ದರಿಂದ 30 ಲಕ್ಷ ವಿಕಲಚೇನರಿಗೆ ಒಬ್ಬ ಪ್ರತಿನಿಧಿಯನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಬೇಕು. ಆಗ ಮಾತ್ರ ನಮ್ಮ ಬೇಡಿಕೆಗಳು ಬೇಗನೇ ಈಡೇಸಿಕೊಳ್ಳಬಹುದು.ಜೊತೆಗೆ ವಿಕಲಚೇತನರ ಸರ್ವಾಂಗಿಣ ಅಭಿವೃದ್ದಿಯಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸರ್ಕಾರಿ ವಿಕಲಚೇತನ ನೌಕರರಿಗೆ ಅವರ ಸೇವಾ ಜೇಷ್ಠತೆಯನ್ನು ಆಧರಿಸಿ ಬಡ್ತಿಯಲ್ಲಿ ಶೇಕಡಾ 3 ರಷ್ಟು ಮಿಸಲಾತಿಯನ್ನು ನೀಡುವಂತೆ ಸುಪ್ರಿಂಕೋರ್ಟ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ದೇಶದ ಎಲ್ಲಾ ರಾಜ್ಯ ಸರ್ಕಾರಗಳಿಗೆ ಆದೇಶ ಮಾಡಿದೆ.ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.ಆದ್ದರಿಂದ ರಾಜ್ಯ ಸರ್ಕಾರ ಶೇ.3ರಷ್ಟು ಮಿಸಲಾತಿಯನ್ನು ಶೀಘ್ರವೇ ಜಾರಿಗೊಳಿಸಬೇಕು.ಇಲ್ಲದಿದ್ದರೆ ಸಂಘದ ಏಪ್ರಿಲ್ 1 ರಂದು ರಾಜ್ಯಾದ್ಯಂತ ಕಪ್ಪು ಬಟ್ಟೆಯನ್ನು ಧರಿಸಿ ಕರ್ತವ್ಯ ನಿರ್ವಹಿಸುವುದರೊಂದಿಗೆ ತಾಲೂಕಿನಲ್ಲಿ ತಹಸಿಲ್ದಾರ ಮೂಲಕ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವುದರ ಮೂಲಕ ಒತ್ತಡ ಹಾಕಲಾಗುತ್ತದೆ

ಪತ್ರಿಕಾಗೋಷ್ಠಿಯಲ್ಲಿ ಸರಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಕೆ.ಗಿರಿಗೌಡ,ಸಮಿತಿ ಸದಸ್ಯರಾದ ಕುಮಾರ,ವಿಕಲಚೇತನ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ಶೋಭಾ.ಎಸ್.,ಸಹ ಕಾರ್ಯದರ್ಶಿ ಜಗದೀಶ ಮೇತ್ರಿ,ಸಂಘದ ನಿರ್ದೇಶಕರಾದ ಮಂಜುನಾಥ.ಎಚ್,ಅಂದಪ್ಪ ಬೋಳರೆಡ್ಡಿ,ಕುಮಾರಸ್ವಾಮಿ,ಬಸವರಾಜ ವಿವೇಕಿ ಮುಂತಾದವರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin