ವೈದ್ಯರ ಸಲಹೆ ಅಥವಾ ಚೀಟಿ ಇಲ್ಲದೆ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಿದರೆ ಲೈಸನ್ಸ್ ರದ್ದು

ಈ ಸುದ್ದಿಯನ್ನು ಶೇರ್ ಮಾಡಿ

Scanning

ಬೆಂಗಳೂರು, ಮಾ.27-ಸ್ತ್ರೀರೋಗ ತಜ್ಞರ ಸೂಚನೆ ಮೇರೆಗೆ ಮಾತ್ರ ಗರ್ಭಿಣಿಯರ ಸ್ಕ್ಯಾನಿಂಗ್ ಮಾಡಬೇಕು. ಒಂದು ವೇಳೆ ವೈದ್ಯರ ಸಲಹೆ ಅಥವಾ ಚೀಟಿ ಇಲ್ಲದೆ ಸ್ಕ್ಯಾನ್ ಮಾಡಿದರೆ ಅಂತಹ ಸ್ಕ್ಯಾನಿಂಗ್ ಕೇಂದ್ರಗಳ ಲೈಸನ್ಸ್ ರದ್ದುಪಡಿಸಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್ ಕುಮಾರ್ ವಿಧಾನ ಪರಿಷತ್‍ನಲ್ಲಿಂದು ತಿಳಿಸಿದ್ದಾರೆ. ಸದಸ್ಯ ಟಿ.ಎ.ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 4398 ಸ್ಕ್ಯಾನಿಂಗ್ ಕೇಂದ್ರಗಳಿವೆ. ಅವುಗಳಲ್ಲಿ 193 ಕೇಂದ್ರಗಳು ಮಾತ್ರ ಸರ್ಕಾರದ್ದು, ಉಳಿದೆಲ್ಲವೂ ಖಾಸಗಿಯವರದು.

ವೈದ್ಯರು ಸೂಚಿಸಿದರೆ ಮಾತ್ರ ಭ್ರೂಣದ ಸ್ಕ್ಯಾನಿಂಗ್ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಇತ್ತೀಚೆಗೆ ವೈದ್ಯರ ಸೂಚನೆ ಇಲ್ಲದೆಯೇ ಕೆಲವೆಡೆ ಭ್ರೂಣದ ಸ್ಕ್ಯಾನಿಂಗ್ ನಡೆಸಿರುವುದು ಬೆಳಕಿಗೆ ಬಂದಿದೆ. ಅಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಮಹಿಳೆಯರನ್ನು ಗೌರವದಿಂದ ಕಾಣುವ ಸಂಪ್ರದಾಯವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಎಲ್ಲವನ್ನೂ ಶಾಸನಗಳಿಂದಲೇ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ ರಮೇಶ್ ಕುಮಾರ್, ಕೊರಟಗೆರೆ ಪ್ರಕರಣದಲ್ಲಿ ದಾಖಲೆಗಳನ್ನು ತರಿಸಿಕೊಂಡು ಪರಿಶೀಲಿಸಲಾಗುವುದು. ಒಂದು ವೇಳೆ ವೈದ್ಯರು ತಪ್ಪಿತಸ್ಥರೆಂದು ಸಾಬೀತಾದರೆ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin