ಜಪಾನ್‍ನಲ್ಲಿ ಭಾರೀ ಹಿಮಪಾತಕ್ಕೆ ವಿದ್ಯಾರ್ಥಿಗಳೂ ಸೇರಿ 12 ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Snow-Fall

ಟೋಕಿಯೊ, ಮಾ.28-ಭಾರೀ ಹಿಮಪಾತದಿಂದ ಏಳು ಶಾಲಾ ವಿದ್ಯಾರ್ಥಿಗಳೂ ಸೇರಿದಂತೆ ಕನಿಷ್ಠ 12 ಮಂದಿ ಮೃತಪಟ್ಟಿರುವ ದುರಂತ ಘಟನೆ ಜಪಾನ್‍ನ ಸ್ಕೀ ರೆಸಾರ್ಟ್‍ವೊಂದರಲ್ಲಿ ಸಂಭವಿಸಿದೆ.  ಜಪಾನ್‍ನ ಟೋಚಿಗಿ ಪ್ರಸ್ಥಭೂಮಿಯಲ್ಲಿ ಏಳು ಪ್ರೌಢಶಾಲೆಗಳ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಿಶಿರಋತುವಿನ ಶಿಲಾರೋಹಣದಲ್ಲಿ ತೊಡಗಿದ್ದಾಗ ಹಠಾತ್ ಹಿಮಪಾತವಾಯಿತು. ಈ ದುರಂತದಲ್ಲಿ ಏಳು ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಬ್ಬರೂ ಸೇರಿದಂತೆ 12 ಮಂದಿ ಬಲಿಯಾದರು. ಹಿಮಪಾತದಿಂದ 40ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ನಾಸು ಆನ್‍ಸೆನ್ ಫ್ಯಾಮಿಲಿ ಸ್ಕೀ ರೆಸಾರ್ಟ್‍ನ ಒಂದು ಇಳಿಜಾರಿನ ಮೇಲ್ಭಾಗದಲ್ಲಿ ಹಿಮಪಾತದಿಂದ ನೀರ್ಗಲ್ಲ ಬಂಡೆಗಳು ಉರುಳಿ ಬಿದ್ದಿತು ಎಂದು ವಾರ್ತಾ ಸಂಸ್ಥೆಯೊಂದು ವರದಿ ಮಾಡಿದೆ.   ಈ ದುರಂತಕ್ಕೂ ಕೆಲ ಗಂಟೆಗಳ ಮುನ್ನ ಸ್ಥಳೀಯ ಹವಾಮಾನ ಸಂಸ್ಥೆ ಹಿಮಪಾತದ ಎಚ್ಚರಿಕೆ ನೀಡಿತ್ತು. ಆದನ್ನು ಲೆಕ್ಕಿಸದೇ ಪರ್ವತಾರೋಹಣದಲ್ಲಿ ಈ ತಂಡ ತೊಡಗಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ವರದಿಗಳು ಹೇಳಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin