‘ತ್ರಿವಳಿ ತಲಾಕ್ ಅಕ್ರಮವೆಂದು ಘೋಷಿಸುವುದು ಅಲ್ಲಾನನ್ನು ಅವಮಾನಿಸಿದಂತೆ’

ಈ ಸುದ್ದಿಯನ್ನು ಶೇರ್ ಮಾಡಿ

Talaq

ನವದೆಹಲಿ, ಮಾ.28-ತನ್ನ ಕಠಿಣ ಧಾರ್ಮಿಕ ನಿಲುವನ್ನು ಸಮರ್ಥಿಸಿಕೊಂಡಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‍ಬಿ) ತ್ರಿವಳಿ ತಲಾಕ್‍ನನ್ನು (ಮುಸ್ಲಿಂ ಸಮುದಾಯದ ವಿಚ್ಛೇದನ ವಿಧಾನ) ಅಕ್ರಮ ಎಂದು ಘೋಷಿಸುವುದಾದರೆ, ಅದು ಅಲ್ಲಾನನ್ನು ಅಪಮಾನಿಸಿದಂತೆ ಹಾಗೂ ಪವಿತ್ರ ಖುರಾನ್ ಗ್ರಂಥವನ್ನು ಪುನರ್ ಬರದಂತೆ ಎಂದು ನಿನ್ನೆ ಸುಪ್ರೀಂಕೋರ್ಟ್‍ಗೆ ತಿಳಿಸಿದೆ.   ಸಂವಿಧಾನದ ವಿಧಿ 25ರ ಅಡಿ (ಧಾರ್ಮಿಕ ಆಚರಣೆಯ ಆಯ್ಕೆ ಹಕ್ಕು) ವೈಯಕ್ತಿಕ ಕಾನೂನುಗಳನ್ನು ಪಾಲಿಸುವ ಮತ್ತು ಜಾರಿಗೊಳಿಸುವ ಹಕ್ಕು ಇಸ್ಲಾಂ ಧರ್ಮಕ್ಕೆ ಇದೆ ಎಂಬುದನ್ನು ಉಲ್ಲೇಖಿಸಿರುವ ಮಂಡಳಿ, ತ್ರಿವಳಿ ತಲಾಕ್‍ನನ್ನು ಕಾನೂನು ಬಾಹಿರ ಎಂದು ಘೋಷಿಸಿದರೆ ಅದು ಅಲ್ಲಾನ ಮಾರ್ಗದರ್ಶನವನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ವಾದ ಮಂಡಿಸಿದೆ.

ಅಲ್ಲಾ ನಮಗೆ ನೀಡಿರುವ ನಿರ್ದೇಶನಗಳನ್ನು ಮತ್ತು ಪವಿತ್ರ ಕುರಾನ್‍ನಲ್ಲಿರುವ ಅಂಶಗಳನ್ನು ತಿರುಚಲು ಸಾಧ್ಯವಿಲ್ಲ ಎಂದು ಲಿಖಿತ ಮನವಿಯಲ್ಲಿ ಪ್ರತಿಪಾದಿಸಿರುವ ಮಂಡಳಿ ಈ ವಿಷಯದ ಬಗ್ಗೆ ಇನ್ನು ಎರಡು ದಿನಗಳಲ್ಲಿ ಅಂತಿಮ ವಿಚಾರಣೆ ನಡೆಯುವ ಹಿನ್ನೆಲೆಯಲ್ಲಿ ತನ್ನ ಈ ವಾದವನ್ನು ಸರ್ವೋಚ್ಚ ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಿದೆ. ಹಿರಿಯ ವಕೀಲ ಎಜಾಬ್ ಮಕ್ಬೂಲ್ ಮೂಲಕ ನ್ಯಾಯಾಲಯಕ್ಕೆ ತನ್ನ ವಾದವನ್ನು ಲಿಖಿತವಾಗಿ ಸಲ್ಲಿಸಿರುವ ಮಂಡಳಿಯು ಕುರಾನ್‍ನಲ್ಲಿರುವ ಅಂಶಗಳನ್ನು ಉಲ್ಲೇಖಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin