ನಾಳೆ ಲೋಕಸಭೆಯಲ್ಲಿ ಜಿಎಸ್‍ಟಿ ಚರ್ಚೆ ಹಿನ್ನೆಲೆಯಲ್ಲಿ ಸಂಸದರೊಂದಿಗೆ ಜೇಟ್ಲಿ ಸಮಾಲೋಚನೆ

ಈ ಸುದ್ದಿಯನ್ನು ಶೇರ್ ಮಾಡಿ

GSt

ನವದೆಹಲಿ, ಮಾ.28- ದೇಶದ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಮೈಲಿಗಲ್ಲಾಗಿರುವ ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್‍ಟಿ) ಮಸೂದೆ ಕುರಿತು ನಾಳೆ ಲೋಕಸಭೆಯಲ್ಲಿ ಏಳು ತಾಸುಗಳ ಕಾಲ ಚರ್ಚೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹಣಕಾಸು ಸಚಿವ ಅರುಣ ಜೇಟ್ಲಿ ಇಂದು ವಿಧೇಯಕಕ್ಕೆ ಸಂಬಂಧಿಸಿದಂತೆ ಸಂಸದರೊಂದಿಗೆ ಸಮಾಲೋಚನೆ ನಡೆಸಿದರು.  ಜುಲೈ 1ರಿಂದ ಜಾರಿಗೆ ಬರಲಿರುವ ಜಿಎಸ್‍ಟಿ ಪದ್ಧತಿಗೆ ಪೂರಕವಾದ ನಾಲ್ಕು ಮಸೂದೆಗಳನ್ನು (ಕೇಂದ್ರ-ಜಿಎಸ್‍ಟಿ, ಸಮಗ್ರ ಜಿಎಸ್‍ಟಿ, ಕೇಂದ್ರಾಡಳಿತ ಪ್ರದೇಶ- ಜಿಎಸ್‍ಟಿ ಮತ್ತು ಸಮಗ್ರ ಕಾನೂನು) ಲೋಕಸಭೆಯಲ್ಲಿ ನಿನ್ನೆ ಮಂಡಿಸಲಾಗಿತ್ತು.

ಈ ಮಸೂದೆ ಬಗ್ಗೆ ಸಂಸದರೊಂದಿಗೆ ವಿತ್ತ ಸಚಿವರು ಇಂದು ಸಮಾಲೋಚನೆ ನಡೆಸಿದರು ಎಂದು ಸಂಸದೀಯ ವ್ಯವಹಾರ ಸಚಿವ ಅನಂತ್‍ಕುಮಾರ್ ಸಭೆ ನಂತರ ಸುದ್ದಿಗಾರರಿಗೆ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin