ಪರಿಶಿಷ್ಟ ವರ್ಗಕ್ಕೆ 86 ಸಾವಿರ ಕೋಟಿ ನೀಡಿರುವುದು ದಾಖಲಾರ್ಹ

ಈ ಸುದ್ದಿಯನ್ನು ಶೇರ್ ಮಾಡಿ

muniyappa

ನಂಜನಗೂಡು, ಮಾ.28- ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರ 86 ಸಾವಿರ ಕೋಟಿ ಬಜೆಟ್ ಅನ್ನು ಪರಿಶಿಷ್ಟ ವರ್ಗಕ್ಕೆ ನೀಡಿರುವುದು ದಾಖಲಾರ್ಹವಾದದ್ದು ಎಂದು ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಪ್ರಯುಕ್ತ ನಗರದ ಅಶೋಕಪುರಂ ಬಡಾವಣೆಯಲ್ಲಿ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಪ್ರತಿಯೊಬ್ಬರಿಗೂ ಸಂವಿಧಾನ ಬದ್ದ ರಕ್ಷಣೆ ಮತ್ತು ಸಾಮಾಜಿಕ ನ್ಯಾಯ ಸಿಗುವಂತಾಗಿದೆ ಅಲ್ಲದೆ ಪರಿಶಿಷ್ಟ ಜಾತಿ ವರ್ಗದವರಿಗೆ 6 ಲಕ್ಷ ಮನೆಗಳನ್ನು ಕೊಡಬೇಕೆಂದು ತೀರ್ಮಾನಿಸಲಾಗಿದೆ ಈಸಂಧರ್ಭದಲ್ಲಿ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಮಾತನಾಡಿ ರಾಜ್ಯದಲ್ಲಿರುವ ಎಲ್ಲಾ ವರ್ಗದ ಬಡವರಿಗೆ ಮತ್ತು ವಸತಿ ರಹಿತರಿಗೆ ಮನೆ ನೀಡಬೇಕೆಂದು ಕೋರಿದ್ದೇನೆ ಎಂದರು.

ವಿಧಾನ ಪರಿಷತ್ ಸದಸ್ಯ ಧರ್ಮಸೇನಾ ಮಾತನಾಡಿ, ಅಂಬೇಡ್ಕರ್ ರವರ ಮೀಸಲಾತಿಯನ್ನು ತಡೆಗಟ್ಟುವುದು ಮತ್ತು ದಲಿತರ ಏಳಿಗೆಯನ್ನು ಸಹಿಸದ ಬಿಜೆಪಿಗೆ ವಿ.ಶ್ರೀನಿವಾಸ ಪ್ರಸಾದ್ ಸೇರಿಕೊಂಡಿದ್ದು ದಲಿತರಿಗೆ ನೋವಿನ ಸಂಗತಿಯಾಗಿದೆ ಎಂದರು.ಹರಳಯ್ಯ ಟ್ರಸ್ಟ್ ಅಧ್ಯಕ್ಷ ಡಾ.ತಿಮ್ಮಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ,ವಿಜಯಕುಮಾರ್, ಕಾಂಗ್ರೆಸ್ ಉಪಾಧ್ಯಕ್ಷ ಗುರುಪಾದಸ್ವಾಮಿ, ಕೆಪಿಸಿಸಿ ಸದಸ್ಯ ಮಹಮದ್ ಅಕ್ಬರ್ ಅಲೀಂ, ಬ್ಲಾಕ್ ಕಾಂಗ್ರೆಸ್ ದೇವರಾಜು, ಎಸ್ಸಿ ಮೋರ್ಚಾ ಅಧ್ಯಕ್ಷ ರ್ಯಾಂಬೋ ಮಹದೇವು, ನಗರಸಭಾ ಸದಸ್ಯ ಸುಂದರರಾಜು, ಸಿ.ಬಸವರಾಜು, ಸ್ವಾಮಿ, ತಾಪಂ ಸದಸ್ಯ ಪದ್ಮನಾಭ್, ದಸಂಸ ಅಧ್ಯಕ್ಷ ಲಿಂಗರಾಜು, ಸೇರಿದಂತೆ ಹಲವಾರು ಪ್ರಮುಖರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin