ಪ್ರತಿ ಕ್ವಿಂಟಾಲ್’ಗೆ 2100 ರೂ. ನೀಡಿ ರೈತರಿಂದ ರಾಗಿ ಖರೀದಿ

ಈ ಸುದ್ದಿಯನ್ನು ಶೇರ್ ಮಾಡಿ

Ragi--01

ಬೆಂಗಳೂರು, ಮಾ.28-ಪ್ರತಿ ಕ್ವಿಂಟಾಲ್ ರಾಗಿಗೆ ಕೇಂದ್ರ ಸರ್ಕಾರ ನಿಗದಿ ಮಾಡಿರುವ 1750 ರೂ. ಜತೆಗೆ ರಾಜ್ಯ ಸರ್ಕಾರ 450 ರೂ.ಗಳ ಪ್ರೋತ್ಸಾಹ ಧನ ನೀಡುತ್ತಿದೆ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ವಿಧಾನಪರಿಷತ್‍ಗೆ ತಿಳಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಆರ್.ಚೌಡರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಗಿ ಖರೀದಿಗೆ ಕೇಂದ್ರ ಸರ್ಕಾರ 1750 ರೂ. ನಿಗದಿ ಮಾಡಿದ್ದು, ರಾಜ್ಯ ಸರ್ಕಾರ 450 ರೂ.ಗಳ ಹೆಚ್ಚುವರಿ ಹಣ ನೀಡಿ ಒಟ್ಟು 2100 ರೂ. ಹಣಕ್ಕೆ ರೈತರಿಂದ ರಾಗಿ ಖರೀದಿಸುತ್ತಿದೆ. ಅದೇ ರೀತಿ ಪ್ರತಿ ಕ್ವಿಂಟಾಲ್ ಜೋಳಕ್ಕೆ 510 ರೂ.ಗಳ ಬೋನಸ್, ಪ್ರತಿ ಕ್ವಿಂಟಾಲ್ ಭತ್ತಕ್ಕೆ ನಿಗದಿ ಬೆಲೆಗಿಂತ 100 ರೂ. ಹೆಚ್ಚು, ತೊಗರಿಗೆ 450 ಹೆಚ್ಚುವರಿ ಹಣ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.

ಕೊಬ್ಬರಿಗೆ ಪ್ರತಿ ಕ್ವಿಂಟಾಲ್ 6240ರೂ. ನಿಗದಿ ಮಾಡಲಾಗಿದ್ದು, ಒಂದು ಸಾವಿರ ರೂ.ಗಳನ್ನು ಪ್ರೋತ್ಸಾಹ ನೀಡಿ ರೈತರಿಂದ ಖರೀದಿಸಲು ಕ್ರಮಕೈಗೊಳ್ಳಲಾಗಿದೆ. ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗುತ್ತಿದೆ ಎಂದು ಸಚಿವರು ತಿಳಿಸಿದರು. ಅದೇ ರೀತಿ ಈರುಳ್ಳಿ ಟೊಮ್ಯಾಟೋ ಯಾವುದೇ ಬೆಳೆಯ ಬೆಲೆ ಕುಸಿದಾಗ ಸರ್ಕಾರ ಮಧ್ಯಪ್ರವೇಶಿಸಿ ರೈತರ ನೆರವಿಗೆ ಧಾವಿಸಲಿದೆ ಎಂದು ಸಚಿವರು ಭರವಸೆ ನೀಡಿದರು. ಬೆಂಬಲ ಬೆಲೆಯಡಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಎಲ್ಲಾ ರೈತರಿಗೆ ಕೃಷಿ ಬೆಲೆ ಅಯೋಗದ ವರದಿಯಿಂದ ಪ್ರಯೋಜನವಾಗಿದೆ ಎಂದು ಸಚಿವರು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin