ಯಡಿಯೂರಪ್ಪನವರ ಹೇಳಿಕೆ ನನಗೆ ಅತೀವ ನೋವು ತಂದಿದೆ : ಗೀತಾ ಮಹದೇವ ಪ್ರಸಾದ್

ಈ ಸುದ್ದಿಯನ್ನು ಶೇರ್ ಮಾಡಿ

Geetha-Mahadev-Prasad

ಗುಂಡ್ಲುಪೇಟೆ, ಮಾ.28- ನಾನು ನಿನ್ನ ತಂದೆಯ ಸಮಾನ ಎಂದು ನಮ್ಮ ಮನೆಗೆ ಬಂದು ಹೇಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಈಗ ನನ್ನ ವಿರುದ್ಧವಾಗಿ ಹೇಳಿಕೆ ನೀಡುತ್ತಿದ್ದಾರೆ. ಇದು ನನಗೆ ಅತೀವ ನೋವು ತಂದಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ ಪ್ರಸಾದ್ ದುಃಖಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ನಮ್ಮ ಮನೆಗೆ ಬಂದಿದ್ದರು. ಆಗ ಮಹದೇವ ಪ್ರಸಾದ್ ನನ್ನ ಸಂಬಂಧಿ. ನೀನು ನನಗೆ ಮಗಳಿದ್ದ ಹಾಗೆ ಎಂದು ಯಡಿಯೂರಪ್ಪ ನನ್ನ ತಲೆಯ ಮೇಲೆ ಕೈ ಇಟ್ಟು ಹೇಳಿದ್ದರು. ಈಗ ಏನೇನೋ ಹೇಳುತ್ತಿದ್ದಾರೆ. ಈ ರಾಜಕೀಯ ಎಂಬುದು ಅತ್ಯಂತ ಕೆಟ್ಟದ್ದು ಎಂದು ನೊಂದು ನುಡಿದರು.

ನೀನು ಅವಿರೋಧವಾಗಿ ಆಯ್ಕೆಯಾಗಬೇಕು. ನಿನ್ನನ್ನು ಅವಿರೋಧವಾಗಿ ಆಯ್ಕೆ ಮಾಡುತ್ತೇವೆ ಎಂದು ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಹೇಳಿದ್ದರು. ನಾನು ಶ್ರೀ ಸುತ್ತೂರು ದೇಶೀಕೇಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ ಎಂದು ತಿಳಿಸಿದರು.   ಯಾರಾದರೂ ಒಂದು ಏಟು ಕೊಟ್ಟರೂ ಸಹಿಸಿಕೊಳ್ಳಬಹುದು. ಆದರೆ ಚುಚ್ಚು ಮಾತುಗಳನ್ನು ತಡೆದುಕೊಳ್ಳಲು ಆಗುವುದಿಲ್ಲ. ಯಡಿಯೂರಪ್ಪ ಅವರು ನೋವಾಗುವಂತೆ ಮಾತನಾಡುವುದು ಥರವಲ್ಲ ಎಂದು ಗೀತಾ ಮಹದೇವ ಪ್ರಸಾದ್ ಕಂಬನಿ ಮಿಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin