ವಿಧಾನಸಭೆಯಲ್ಲಿ ಪ್ರತಿದ್ವನಿಸಿತು ಸಚಿವರ ಹಾಜರಾತಿ ಕೊರತೆ ವಿಚಾರ

ಈ ಸುದ್ದಿಯನ್ನು ಶೇರ್ ಮಾಡಿ

Session-01

ಬೆಂಗಳೂರು,ಮಾ28- ಸಚಿವರ ಹಾಜರಾತಿ ಕೊರತೆ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಏರಿದ ಧ್ವನಿಯಲ್ಲಿ ವಾಗ್ವಾದಕ್ಕೆ ಎಡೆಮಾಡಿಕೊಟ್ಟ ಪ್ರಸಂಗ ಜರುಗಿತು.  ಇಂದು ಬೆಳಗ್ಗೆ ಸದಸ ಸಮಾವೇಶಗೊಂಡಾಗ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸಚಿವರ ಹಾಜರಾತಿ ವಿಚಾರ ಪ್ರಸ್ತಾಪಿಸಿ ಸದಸನಕ್ಕೆ ಸಚಿವರ ಬರ ಬಂದಿದೆ. ಉಪಚುನಾಣೆಯಲ್ಲಿ ಹಣ ಹಂಚಲು ಹೋಗಿದ್ದಾರೆ ಎಂಬ ಆರೋಪಗಳು ಮಾಧ್ಯಮಗಳಲ್ಲಿ ವರದಿ ಆಗಿದೆ ಎನ್ನುತ್ತಿದ್ದಂತೆ ಆಡಳಿತ ಮತ್ತು ಬಿಜೆಪಿ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆದು ಆರೋಪ- ಪ್ರತ್ಯಾರೋಪಗಳ ಸುರಿಮಳೆಯೇ ಆಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಟಿ.ಬಿ.ಜಯಚಂದ್ರ, ಕೆ.ಜೆ.ಜಾರ್ಜ್, ಬಿಜೆಪಿ ಶಾಸಕರಾದ ಸಿ.ಟಿ.ರವಿ, ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್ ನಡುವೆ ವಾಗ್ವಾದ ನಡೆಯಿತು.  ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರು ಪದೇ ಪದೆ ಉಭಯ ಪಕ್ಷಗಳ ಶಾಸಕರನ್ನು ಸಮಾಧಾನ ಪಡಿಸುವ ಯತ್ನ ಮಾಡಿ ಪ್ರಸ್ತಾಪಿಸಿರುವ ವಿಷಯ ಸದನದಲ್ಲಿ ಚರ್ಚಿಸಲು ಆಗುವುದಿಲ್ಲ ಎಂದಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಕೆ.ಆರ್.ರಮೇಶ್ ಕುಮಾರ್, ಸದನದಲ್ಲಿ ಚರ್ಚೆ ಆಗಿರುವ ವಿಚಾರ ನಡವಳಿಕೆಯಲ್ಲಿ ಇರಬೇಕೇ… ಬೇಡವೇ ಎಂದು ತೀರ್ಮಾನಿಸಬೇಕೆಂದು ಸಭಾಧ್ಯಕ್ಷರನ್ನು ಕೋರಿದರು.

ಆಗ ಸಭಾಧ್ಯಕ್ಷರು ಎಲ್ಲ ವಿಚಾರವನ್ನು ಕಡತದಿಂದ ತೆಗೆಯುವಂತೆ ಸೂಚನೆ ನೀಡಿದರು. ಇದಕ್ಕೆ ಬಿಜೆಪಿ ಶಾಸಕರು ಆಕ್ಷೇಪ ಎತ್ತಿದರು.  ಜಗದೀಶ್ ಶೆಟ್ಟರ್ ಮಾತನಾಡಿ, ಅಸಂಸದೀಯ ಶಬ್ದಗಳನ್ನು ಬಳಸಿಲ್ಲ ಈ ವಿಷಯವನ್ನು ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿಯವರು ಉತ್ತರಿಸಿದ ನಂತರ ಮುಂದುವರೆಸುತ್ತೇವೆ ಎಂದಾಗ ಈ ವಿಚಾರದ ಚರ್ಚೆಗೆ ತೆರೆ ಬಿದ್ದಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin