ಮಾಹಿ ಆಧಾರ್ ಮಾಹಿತಿ ಟ್ವೀಟ್ ಮಾಡಿದ್ದ ಏಜೆನ್ಸಿ ಬ್ಲಾಕ್ ಲಿಸ್ಟ್’ಗೆ ಸೇರ್ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

Dhonni--01

ನವದೆಹಲಿ. ಮಾ.29 : ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ದೋನಿಯವರ ಆಧಾರ್ ಕಾರ್ಡ್ ನ ವೈಯಕ್ತಿಕ ಮಾಹಿತಿಯನ್ನು ಟ್ವಿಟರ್‍‍ನಲ್ಲಿ ಬಹಿರಂಗ ಪಡಿಸಿ ಏಜೆನ್ಸಿಯೊಂದು ಯಡವಟ್ಟುಮಾಡಿಕೊಂಡಿದೆ.   ಆಧಾರ್ ಸಂಖ್ಯೆ ನೀಡುವ ಏಜೆನ್ಸಿಯೊಂದು ಆಧಾರ್ ಕಾರ್ಡ್‍ ಪಡೆಯಲು ಧೋನಿ ನೀಡಿದ ಅರ್ಜಿಯ  ಫೋಟೊವನ್ನು ಟ್ವೀಟ್ ಮಾಡಿ ದೋನಿ ಪತ್ನಿ ಸಾಕ್ಷಿ ಅವರ ಕೆಂಗಣ್ಣಿಗೆ ಗುರಿಯಾಗಿದೆ.

ಟ್ವಿಟ್ಟರ್ ನಲ್ಲಿ ಧೋನಿ ಮಾಹಿತಿ ಟ್ವೀಟ್ ಮಾಡಿದ್ದನ್ನು ಕಂಡ ದೋನಿ ಪತ್ನಿ ಸಾಕ್ಷಿ ಆಧಾರ್ ಕಾರ್ಡ್‍ನ ಮಾಹಿತಿ ಮತ್ತು ಅದಕ್ಕಾಗಿ ಸಲ್ಲಿಸಿರುವ ಅರ್ಜಿಯನ್ನು ಈ ರೀತಿ ಬಹಿರಂಗ ಪಡಿಸಿದ್ದೀರಿ. ಇನ್ನೆಲ್ಲಿ ಗೌಪ್ಯತೆ ಉಳಿದಿದೆ? ಎಂದು ಟ್ವೀಟ್ ಮಾಡಿ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರ ಗಮನಕ್ಕೆ ತಂದಿದ್ದರು. ಈ ಪ್ರಮಾದದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಪ್ರಸಾದ್, ಪ್ರಸ್ತುತ ಏಜೆನ್ಸಿ ವಿರುದ್ಧ ಕ್ರಮಕೊಳ್ಳುವುದಾಗಿ ಹೇಳಿದ್ದರು. ಈ ಪ್ರಮಾದವೆಸಗಿರುವ ಸಂಸ್ಥೆಯನ್ನು ಯುಐಡಿಎಐ 10 ವರ್ಷಗಳ ಕಾಲ ಕಪ್ಪು ಪಟ್ಟಿಗೆ ಸೇರಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin