ಅತಿ ವಿರಳ ವಂಶವಾಹಿ ದೋಷಕ್ಕೆ ಒಳಗಾಗಿರುವ ಪ್ರಪಂಚದ ಏಕೈಕ ಮಹಿಳೆ ಎಮಾನ್

ಈ ಸುದ್ದಿಯನ್ನು ಶೇರ್ ಮಾಡಿ

Eman-Ahamad

ಮುಂಬೈ, ಮಾ.30- ಭಾರೀ ದೇಹ ತೂಕದಿಂದಾಗಿ ಭಾರತದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈಜಿಪ್ಟ್ ನ ಎಮಾನ್ ಅಹಮ್ಮದ್ ಪ್ರಪಂಚದಲ್ಲಿಯೇ ಅತ್ಯಂತ ವಿರಳ ವಂಶವಾಹಿ ದೋಷಕ್ಕೆ ಒಳಗಾಗಿರುವ ಏಕೈಕ ಮಹಿಳೆಯಾಗಿದ್ದಾರೆ. ಈ ತಿಂಗಳ ಆರಂಭದಲ್ಲಿ ಎಮಾನ್ ತನ್ನ ದೇಹತೂಕ ಇಳಿಸಲು ಮುಂಬೈನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ಈಕೆಗೆ ಬ್ಯಾರಿಯಾಟ್ರಿಕ್ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ 500 ರಿಂದ 340 ಕೆಜಿಗೆ ದೇಹತೂಕ ಇಳಿಸಲಾಗಿದೆ.

ಪರಿಣಿತ ವೈದ್ಯರಿಂದ ಎಮಾನ್‍ಗೆ ನಿರಂತರ ಚಿಕಿತ್ಸೆ ನೀಡುತ್ತಿದ್ದು, ಈಕೆ ಬಳಲುತ್ತಿರುವ ಅತ್ಯಂತ ಅಪರೂಪದ ವಂಶವಾಹಿ ನ್ಯೂನ್ಯತೆಯಿಂದಾಗಿ ಚಿಕಿತ್ಸೆ ಪೂರ್ಣ ಪ್ರಮಾಣದಲ್ಲಿ ಫಲಿಸುತ್ತಿಲ್ಲ. ಇದೊಂದು ಅಸಾಧಾರಣ ಸ್ಥೂಲಕಾಯದ ಸಮಸ್ಯೆಯಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin