ಒಣಗಿಹೋದ 13 ಎಕರೆ ಶೇಂಗಾ ಬೆಳೆ, ನೊಂದ ರೈತ ವಿಷಸೇವಿಸಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Former-Suicide---01

ಬಾಗಲಕೋಟೆ, ಮಾ.30– ರಾಜ್ಯದಲ್ಲಿ ರೈತರ ಆತ್ಮಹತ್ಯೆ ಮುಂದುವರೆದಿದ್ದು , ಇಂದು ಕೂಡ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿ.ಎನ್.ಜಾಲಿಹಾಳ ಗ್ರಾಮದ ಗುಂಡಪ್ಪ ಡೊಳ್ಳಿನ(44) ಆತ್ಮಹತ್ಯೆ ಮಾಡಿಕೊಂಡ ರೈತ. ಈತ 13 ಎಕರೆ ಜಮೀನಿನಲ್ಲಿ ಶೇಂಗಾ ಬೆಳೆದಿದ್ದು, ಬೆಳೆ ಸಂಪೂರ್ಣ ಒಣಗಿ ಹೋಗಿದ್ದರಿಂದ ನೊಂದು ಬಾದಾಮಿ ಪಟ್ಟಣದ ಹೊರವಲಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಕೃಷಿಗಾಗಿ ವಿವಿಧ ಬ್ಯಾಂಕ್‍ಗಳಿಂದ ಸಾಲ ಮಾಡಿದ್ದ ಈತ ಟ್ರ್ಯಾಕ್ಟರ್ ಖರೀದಿ ಹಾಗೂ ಕೈ ಸಾಲ ಸೇರಿ ಸುಮಾರು 15 ಲಕ್ಷ ಸಾಲ ಮಾಡಿದ್ದರು. ಶೇಂಗಾ ಬೆಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಸಾಲ ತೀರಿಸಲು ಆಗದೆ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin