ಕೊಲ್ಕತ್ತಾ : ಹೋಟೆಲ್’ಗೆ ಬೆಂಕಿಬಿದ್ದು, ಇಬ್ಬರ ಸಜೀವ ದಹನ, 7 ಮಂದಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Hotel-Fire--01

ಕೊಲ್ಕತಾ, ಮಾ.30-ಹೋಟೆಲ್ ಒಂದರಲ್ಲಿ ಕಾಣಿಸಿಕೊಂಡ ಭೀಕರ ಬೆಂಕಿಯ ಕೆನ್ನಾಲಿಗೆಗೆ ಇಬ್ಬರು ಸುಟ್ಟು ಕರಕಲಾದ ಘಟನೆ ದಕ್ಷಿಣ ಕೊಲ್ಕತಾದಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಈ ದುರಂತದಲ್ಲಿ ಏಳು ಮಂದಿ ತೀವ್ರ ಗಾಯಗೊಂಡಿದ್ದಾರೆ. ಕೊಲ್ಕತಾದ ಹೋ ಚೋ ಮಿನ್ ಸರಣಿ 3 ಲೇನ್‍ನಲ್ಲಿರುವ ಗೋಲ್ಡನ್ ಪಾರ್ಕ್ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದ ಅನೂಪ್ ಅಗರ್‍ವಾಲ್ ಮತ್ತು ಜುಗಲ್‍ಕಿಶೋರ್ ಗುಪ್ತಾ ಬೆಂಕಿ ದುರಂತದಲ್ಲಿ ಸಜೀವ ದಹನಗೊಂಡ ದುರ್ದೈವಿಗಳು.
ಹೋಟೆಲ್‍ನಲ್ಲಿ ಮುಂಜಾನೆ 3 ಗಂಟೆಯಲ್ಲಿ ಬೆಂಕಿ ಕಾಣಿಸಿಕೊಂಡಿತು.

ಒಂಭತ್ತು ಅಗ್ನಿಶಾಮಕ ವಾಹನಗಳೊಂದಿಗೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹೋಟೆಲ್ ಸಿಬ್ಬಂದಿ ಸೇರಿದಂತೆ 30 ಜನರನ್ನು ರಕ್ಷಿಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನೆಲ ಅಂತಸ್ತಿನಲ್ಲಿದ್ದ ಅಡುಗೆ ಮನೆಯಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಹೋಟೆಲ್‍ನ ಇತರ ಕೊಠಡಿಗಳಿಗೂ ವಿಸ್ತರಿಸಿತು. ತೀವ್ರ ಗಾಯಗೊಂಡ ಒಂಭತ್ತು ಮಂದಿಯನ್ನು ಎಸ್‍ಎಸ್‍ಕೆಎಂ ಅಸ್ಪತ್ರೆಗೆ ಸಾಗಿಸಲಾಯಿತು. ಗಾಯಳುಗಳಲ್ಲಿ ಇಬ್ಬರು ಕೊನೆಯುಸಿರೆಳೆದರು ಎಂದು ಅಗ್ನಿಶಾಮಕ ಇಲಾಖೆ ಉನ್ನತಾಧಿಕಾರಿಗಳು ಹೇಳಿದ್ದಾರೆ.   ಬೆಂಕಿ ಕೆನ್ನಾಲಿಗೆಗೆ ಹೆದರಿ ಮೂರನೇ ಮಹಡಿಯಿಂದ ಜಿಗಿದ ಮೂವರು ವ್ಯಕ್ತಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin