ಗುಡಿಬಂಡೆಯಲ್ಲಿ ನಾಗಮಣಿ ನೋಡಲು ಮುಗಿ ಬಿದ್ದ ಜನರು..!

ಈ ಸುದ್ದಿಯನ್ನು ಶೇರ್ ಮಾಡಿ

Nagamani--01

ಗುಡಿಬಂಡೆ, ಮಾ.30– ಜನ ಮರುಳೋ , ಜಾತ್ರೆ ಮರುಳೋ ಎಂಬಂತೆ ಯುಗಾದಿ ಹಬ್ಬದ ದಿನ ಗುಡಿಬಂಡೆ ಪಟ್ಟಣದ ನಖಾಜಿ ಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದ ನಾಗರಹಾವು ಪ್ರತ್ಯಕ್ಷವಾಗಿತ್ತು.  ಇದನ್ನು ನೋಡಲು ತಂಡೋಪತಂಡವಾಗಿ ಜನರು ಜಮಾಯಿಸಿದರು. ಗರ್ಭಗುಡಿಯಲ್ಲಿ ದೇವರ ಮೂರ್ತಿಯನ್ನು ಸುತ್ತಿಕೊಂಡಿದ್ದ ನಾಗರಹಾವು ಕೆಲ ಕ್ಷಣದಲ್ಲಿ ಅಕ್ಕಿ ಇಟ್ಟಿರುವ ತಟ್ಟೆಯಲ್ಲಿ ಮಣಿಯೊಂದನ್ನು ಉಗುಳಿತು ಎಂದು ಭಕ್ತರು ಹೇಳುತ್ತಾರೆ. ಈ ವಿಷಯ ತಿಳಿದು ಅಕ್ಕಪಕ್ಕದ ಗ್ರಾಮಗಳಿಂದ ಸಾವಿರಾರು ಜನ ಈ ಚಿಕ್ಕ ದೇವಾಲಯಕ್ಕೆ ಬಂದ ಸರದಿ ಸಾಲಿನಲ್ಲಿ ನಿಂತು ಆ ಮಣಿಯನ್ನು ವೀಕ್ಷಿಸಿದರು. ಕೆಲವು ಆಸ್ತಿಕರು ಇದು ದೇವಿಯ ಪವಾಡ ಎಂದು ಹೇಳಿದರೆ, ಕೆಲವರು ಇದು ಸುಮ್ಮನೆ ಜನರನ್ನು ಆಕರ್ಷಣೆಗೆ ಮಾಡಿದ್ದಾರೆ ಎಂದು ಹೇಳಿದರು.

ಒಟ್ಟಿನಲ್ಲಿ ಹಿರಿಯರು ಹೇಳುವಂತೆ ಹುಣ್ಣಿಮೆಯಲ್ಲಿ ನಾಗರಹಾವು ಮಣಿಯನ್ನು ಉಗುಳುತ್ತವೆ. ಆದರೆ ಅಮಾವಾಸ್ಯೆಯ ನಂತರ ಇದು ಕಂಡು ಬಂದಿರುವುದು ಎಲ್ಲರನ್ನು ಚಕಿತಗೊಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin