ಗ್ಯಾಂಗ್‍ರೇಪ್ ಪ್ರಕರಣ, ರಾಜ್ಯಸಭೆಯಲ್ಲಿ ಕೋಲಾಹಲ

ಈ ಸುದ್ದಿಯನ್ನು ಶೇರ್ ಮಾಡಿ

Rajya-sabha

ನವದೆಹಲಿ, ಮಾ.30-ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತ ವಿದ್ಯಾರ್ಥಿನಿ ಬಗ್ಗೆ ರಾಜಸ್ತಾನದ ಸಚಿವರೊಬ್ಬರು ನೀಡಿರುವ ಹೇಳಿಕೆ ಇಂದು ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿ ಭಾರೀ ಕೋಲಾಹಲಕ್ಕೆ ಕಾರಣವಾಯಿತು. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿ ಗದ್ದಲ ಸೃಷ್ಟಿಸಿದ್ದರಿಂದ ಕೆಲಕಾಲ ಸದನದ ಕಲಾಪವನ್ನು ಮುಂದೂಡಲಾಯಿತು.  ಸಂಸತ್ತಿನ ಮೇಲ್ಮನೆಯಲ್ಲಿ ಇಂದು ಕಲಾಪ ಆರಂಭವಾಗುತ್ತಿದ್ದಂತೆ ಜೆಡಿಯು ಸದಸ್ಯೆ ಕಹಕಾಶಾನ್ ಪರ್ವಿನ್ ಈ ವಿಷಯ ಪ್ರಸ್ತಾಪಿ, ರಾಜಸ್ತಾನ ಗೃಹ ಸಚಿವ ಗುಲಾಬ್ ಚಂದ್ ಕಟಾರಿಯಾ, ಗ್ಯಾಂಗ್‍ರೇಪ್‍ಗೆ ಒಳಗಾದ ಸಂಸತ್ರೆಯ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದರು. ಪರ್ವಿನ್‍ಗೆ ಕಾಂಗ್ರೆಸ್‍ನ ಮಹಿಳಾ ಸದಸ್ಯರೂ ಬೆಂಬಲ ಸೂಚಿಸಿ, ರಾಜಸ್ತಾನ ಸಚಿವರು ನೀಡಿರುವ ಹೇಳಿಕೆಯ ಪತ್ರಿಕಾ ವರದಿಗಳನ್ನು ಪ್ರದರ್ಶಿಸಿದರು.

ಉಪ ಸಭಾಪತಿ ಪಿ.ಜೆ. ಕುರಿಯನ್, ನೋಟಿಸ್ ಇಲ್ಲದೇ ಈ ಕುರಿತು ಚರ್ಚೆಗೆ ಅವಕಾಶ ನೀಡಲು ನಿರಾಕರಿಸಿದಾಗ, ಮಹಿಳಾ ಸದಸ್ಯರು ಸಭಾಪತಿ ಪೀಠದ ಮುಂದಿನ ಸ್ಥಳಕ್ಕೆ ಧಾವಿಸಿ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು. ಪುರುಷ ಸದಸ್ಯರು ಸಹ ಮಹಿಳೆಯರ ಧರಣಿಗೆ ಸಾಥ್ ನೀಡಿದರು.  ಸದನದಲ್ಲಿ ಕೋಲಾಹಲದ ವಾತಾವರಣ ಉಂಟಾದ ಕಾರಣ ಕುರಿಯನ್ ಕಲಾಪವನ್ನು 10 ನಿಮಿಷ ಕಾಲ ಮುಂದೂಡಿದರು. ವಿದ್ಯಾರ್ಥಿನಿಯು ಎಂಟು ಜನರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿರುವ ಸಾಧ್ಯತೆ ಇಲ್ಲ. ಆಕೆ ನೀಡಿರುವ ದೂರೇ ಅನುಮಾನವಾಗಿದೆ ಎಂದು ರಾಜಸ್ತಾನ ಸಚಿವರು ವಿವಾದಾತ್ಮಕ ಹೇಳಿಕೆ ನೀಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin