ಪತ್ನಿಗೆ ವಂಚಿಸಿದ ನಿವೃತ್ತ ಎಎಸ್‍ಐ ವಿರುದ್ಧ ದೂರು ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

ASI--01

ಬೆಂಗಳೂರು, ಮಾ.30- ಪತ್ನಿಗೆ ವಂಚಿಸಿದ ನಿವೃತ್ತ ಎಎಸ್‍ಐ ವಿರುದ್ಧ ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿವೃತ್ತ ಎಎಸ್‍ಐ ಚಿಕ್ಕತಿಪ್ಪಯ್ಯ ಪತ್ನಿಗೆ ವಂಚಿಸಿರುವಾತ. ಪತ್ನಿ ಬದುಕಿರುವಾಗಲೇ ಚಿಕ್ಕತಿಪ್ಪಯ್ಯ ಎರಡನೇ ಮದುವೆ ಮಾಡಿಕೊಂಡಿದ್ದಾನೆ. ಎರಡನೇ ಮದುವೆ ನಂತರ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದರಿಂದ ನೊಂದ ಜಯಲಕ್ಷ್ಮಮ್ಮ ವಿಚ್ಛೇದನ ನೀಡುವಂತೆ ಗಂಡನಿಗೆ ವಕೀಲರ ಮೂಲಕ ನೋಟಿಸ್ ಜಾರಿ ಮಾಡಿಸಿದ್ದರು ಎನ್ನಲಾಗಿದೆ.

ಕೋರ್ಟ್ ಕಚೇರಿ ಅಲೆಯುವ ಬದಲು ಮಾತುಕತೆಯಲ್ಲೇ ಸಮಸ್ಯೆ ಬಗೆಹರಿಸಿಕೊಳ್ಳಲು ಚಿಕ್ಕತಿಪ್ಪಯ್ಯ ಮನವಿ ಮಾಡಿದ್ದರಿಂದ ಪತ್ನಿಯೂ ಸಮ್ಮತಿಸಿದ್ದಾರೆ. ಹಿರಿಯರ ಸಮ್ಮುಖದಲ್ಲಿ ಮಾತುಕತೆ ನಡೆಸಿ ಜಯಲಕ್ಷ್ಮಮ್ಮನಿಗೆ 6 ಲಕ್ಷ ರೂ. ಜೀವನಾಂಶ ನೀಡುವುದಾಗಿ ಹೇಳಿದ ಚಿಕ್ಕತಿಪ್ಪಯ್ಯ 3 ಲಕ್ಷ ರೂ. ಜೀವನಾಂಶ ನೀಡಿ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾನೆ. ಆ ನಂತರ ಉಳಿದ 3 ಲಕ್ಷ ರೂ. ನೀಡಲು ಸತಾಯಿಸುತ್ತಿದ್ದರಿಂದ ಮೊದಲ ಪತ್ನಿ ಜಯಲಕ್ಷ್ಮಮ್ಮ ಯಲಹಂಕ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin