ರೈತನನ್ನು ನುಂಗಿದ 23 ಅಡಿ ಉದ್ದದ ಹೆಬ್ಬಾವು..! (Video)

ಈ ಸುದ್ದಿಯನ್ನು ಶೇರ್ ಮಾಡಿ

python

ಜಕಾರ್ತ, ಮಾ.30-ರೈತನೊಬ್ಬನನ್ನು ದೈತ್ಯ ಹೆಬ್ಬಾವು ನುಂಗಿದ ಸಿನಿಮೀಯ ಘಟನೆ ಇಂಡೋನೆಷ್ಯಾದ ಸುಲಾವೆಸಿ ದ್ವೀಪದಲ್ಲಿ ನಡೆದಿದೆ. ಸುಲಾವೆಸಿ ಪೂರ್ವ ದ್ವೀಪ ಸಾಲೊಬೀರ್ ಗ್ರಾಮದ ತಾಳೆ ತೋಟವೊಂದರಲ್ಲಿ ಈ ಘಟನೆ ನಡೆದಿದೆ. ತಾಳೆಹಣ್ಣು ಕುಯ್ಯಲು ತೋಟಕ್ಕೆ ತೆರಳಿದ್ದ ಯುವ ರೈತ 25 ವರ್ಷದ ಅಕ್ಬರ್ ಮನೆಗೆ ಹಿಂದಿರುಗದೇ ನಾಪತ್ತೆಯಾಗಿದ್ದರು. ಕುಟುಂಬದ ಸದಸ್ಯರು ತಾಳೆ ತೋಟದಲ್ಲಿ ಹುಡುಕಾಡಿದಾಗ ಹೊಟ್ಟೆ ಉಬ್ಬಿದ್ದ ದೊಡ್ಡ ಹೆಬ್ಬಾವೊಂದು ಮಲಗಿತ್ತು. ಅದರ ಪಕ್ಕದಲ್ಲಿ ತಾಳೆ ಹಣ್ಣು ಕ್ಯುಯಲು ಬಳಸುವ ಸಲಕರಣೆಗಳು ಮತ್ತು ಪಾದರಕ್ಷೆಗಳು ಬಿದ್ದಿತು.

https://www.youtube.com/watch?v=bBgniHs37cY

ಇಪ್ಪತ್ಮೂರು ಅಡಿ ಉದ್ದ ಹೆಬ್ಬಾವು ಅಕ್ಬರ್‍ನನ್ನು ಇಡಿಯಾಗಿ ನುಂಗಿದೆ ಎಂದು ದೃಢಪಡುತ್ತಿದ್ದಂತೆ ಗ್ರಾಮಸ್ಥರು ಅದನ್ನು ಸೆರೆಹಿಡಿದರು. ದೈತ್ಯ ಸರಿಸೃಪದ ಹೊಟ್ಟೆಯನ್ನು ಸೀಳಿ ಆತನ ಮೃತದೇಹವನ್ನು ಹೊರಕ್ಕೆ ತೆಗೆಯಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin