ನಾಳೆಯಿಂದ ಕರಿಯಮ್ಮದೇವಿ ಜಾತ್ರಾ ಮಹೋತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

gadaga-2
ಗದಗ,ಮಾ.27- ಗದುಗಿನ ಐತಿಹಾಸಿಕ ಕರಿಯಮ್ಮನಕಲ್ಲು ಕರಿಯಮ್ಮದೇವಿಯ 88ನೇ ಜಾತ್ರಾ ಮಹೋತ್ಸವ ನಮ್ಮ ನಗರ ಜಾತ್ರೆಯ ಕಾರ್ಯಕ್ರಮಗಳು ನಾಳೆಯಿಂದ 30ರವರೆಗೆ ನಡೆಯಲಿವೆ ಎಂದು ಕರಿಯಮ್ಮ ಕಲ್ಲು ಬಡಾವಣೆ ಸುಧಾರಣಾ ಸಮಿತಿಯ ಗೌರವಾಧ್ಯಕ್ಷ ನಗರಸಭೈಯ ಸದಸ್ಯ ಎಲ್.ಡಿ. ಚಂದಾವರಿ ಹೇಳಿದರು.ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇಂದು ಕರಿಯಮ್ಮದೇವಿ ಬೆಳ್ಳಿ ಉತ್ಸವ ಮೂರ್ತಿ ದರ್ಶನ, ಸಂಜೆ ನಡೆಯುವ ಜಾತ್ರಾ ಮಹೋತ್ಸವ ಪ್ರಾರಂಭೈೂೀತ್ಸವ ಸಮಾರಂಭದ ಸಾನಿಧ್ಯವನ್ನು ಸೊರಟೂರಿನ ಜ. ಅನ್ನದಾನೀಶ್ವರ ಶಾಖಾಮಠದ ಪೂಜ್ಯ ಶಿವಯೋಗೀಶ್ವರ ಮಹಾಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ನಗರಸಭಾ ಸದಸ್ಯ ಎಲ್.ಡಿ. ಚಂದಾವರಿ ವಹಿಸುವರು. ಉದ್ಘಾಟನೆಯನ್ನು ಜಿಪಂ ಅಧ್ಯಕ್ಷ ವಾಸಣ್ಣ ಕುರಡಗಿ ನೆರವೇರಿಸುವರು.

ಮುಖ್ಯ ಅತಿಥಿಗಳಾಗಿ ನಗರಾಧ್ಯಕ್ಷ ಪೀರಸಾಬ ಕೌತಾಳ, ಉಪಾಧ್ಯಕ್ಷ ಶ್ರೀನಿವಾಸ ಹುಯಿಲಗೋಳ, ವಿರೋಧ ಪಕ್ಷದ ನಾಯಕ ಸದಾನಂದ ಪಿಳ್ಳೆ, ಎಪಿಎಂಸಿ ಅಧ್ಯಕ್ಷ ಸಿ.ಬಿ. ಬಡ್ನಿ, ಉಪಾಧ್ಯಕ್ಷ ಅಜ್ಜಪ್ಪಗೌಡ ಹಿರೇಮನಿ ಪಾಟೀಲ ಆಗಮಿಸುವರು.ದಾನಿಗಳಿಗೆ ಹಾಗೂ ಗಣ್ಯರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕರಿಯಮ್ಮದೇವಿ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಂದ ವೇಷ ಭೂಷಣ ಪ್ರದರ್ಶನ. ಪೂಜಾ ಬೇವೂರ ಅವರಿಂದ ಸುಗಮ ಸಂಗೀತ ಇದೆ. ನಾಳೆ ಸಂಜೆ ಸಕಲ ಮಂಗಳ ವಾದ್ಯ ವೈಭವದೊಂದಿಗೆ ಮಹಾ ರಥೋತ್ಸವ ನಡೆಯಲಿದೆ. ಸಂಜೆ ಸಾಂಸ್ಕೃತಿಕ  ಕಾರ್ಯಕ್ರಮಗಳು ನಡೆಯಲಿವೆ. ಇದೇ ಸಂದರ್ಭದಲ್ಲಿ ಕರಿಯಮ್ಮದೇವಿ ಸಭಾಭವನದ ಹೊರಾಂಗಣ ಕಟ್ಟಡದ ವಿನ್ಯಾಸವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಬಿಡುಗಡೆಗೊಳಿಸುವರು.
ಅಧ್ಯಕ್ಷತೆಯನ್ನು ಕರಿಯಮ್ಮದೇವಿ ಜಾತ್ರಾ ಸಮಿತಿಯ ಅಧ್ಯಕ್ಷ ಸಿ.ಬಿ. ಸೊಲಬಣ್ಣವರ ವಹಿಸುವರು, ನಗರಸಭಾ ಸದಸ್ಯ ಎಲ್.ಡಿ. ಚಂದಾವರಿ, ಧಾರವಾಡ ಕೆಸಿಸಿ ಬ್ಯಾಂಕ್‍ನ ನಿರ್ದೆಶಕ ಸಿ.ಕೆ. ಮಾಳಶೆಟ್ಟಿ ಉಪಸ್ಥಿತರಿರುವರು. ಜಿಲ್ಲಾ ಕಸಾಪ ಅಧ್ಯಕ್ಷ ಶರಣು ಗೋಗೇರಿ ಹಾಗೂ ಪತ್ರಕರ್ತ ಬಸವರಾಜ ದಂಡಿನ ಅವರಿಗೆ ಸನ್ಮಾಸಿಸಲಾಗುತ್ತದೆ.ಕೊಣ್ಣೂರಿನ ಶ್ರೀಚಕ ಮಹಿಳಾ ಜಾನಪದ ಕಲಾ ತಂಡದಿಂದ ಡೊಳ್ಳು ಕುಣಿತ, ಅರುಣೋದಯ ಕಲಾ ತಂಡದ ಶಂಕರಣ್ಣ ಸಂಕಣ್ಣವರ ಮತ್ತು ಸಂಗಡಿಗರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಜಾನಪದ ಸಂಗೀತೋತ್ಸವ ಹಾಗೂ ಹರ್ತಿಯ ವೀರಭದ್ರೇಶ್ವರ ಟ್ರಸ್ಟ ಕಮೀಟಿಯ ಕಲಾಬಳಗದಿಂದ ವೀರಗಾಸೆ ಕುಣಿತ ನಡೆಯಲಿದೆ.ಏ. 30ರಂದು ನಡೆಯುವ ಮಹಾ ಅನ್ನಸಂತರ್ಪಣೆಗೆ ಜಗದೀಶ ಪೂಜಾರ ಚಾಲನೆ ನೀಡಲಿದ್ದು, ಸಂಜೆ ನಡೆಯುವ ಸಾಂಸ್ಕೃತಿಕ  ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಸಿ.ಕೆ. ಮಾಳಶೆಟ್ಟಿ ವಹಿಸುವರು.

ಮುಖ್ಯ ಅತಿಥಿಗಳಾಗಿ ನಗರಸಭಾ ಸದಸ್ಯ ಅನಿಲ ಸಿಂಗಟಾಲಕೇರಿ, ಮಂಜು ಪೂಜಾರ, ಸಂಜಯ ಸಿಂದಿಗೇರಿ, ಗಣ್ಯ ವರ್ತಕ ಅಂದಾನೆಪ್ಪ ಪಟ್ಟಣಶೆಟ್ಟಿ, ಎಪಿಎಂಸಿ ಸದಸ್ಯ ವಿ.ಎಚ್. ದೇಸಾಯಿಗೌಡ್ರ ಆಗಮಿಸುವರು. ನಿವೃತ್ತ ಪ್ರಾಚಾರ್ಯ ಡಾ. ಸಿದ್ದಣ್ಣ ಜಕಬಾಳ, ಸಾಹಿತಿ ಡಾ. ರಾಜೇಂದ್ರ ಗಡಾದ, ಈರಪ್ಪ ಮೈದರಗಿ ಹಾಗೂ ಶರದ್ ಜೋಶಿ ಅವರಿಗೆ ಸನ್ಮಾಸಿಸಲಾಗುತ್ತದೆ. ಕರಿಯಮ್ಮದೇವಿ ಪೂಪ್ರಾ. ಶಾಲಾ ಮಕ್ಕಳಿಂದ ಹಾಗೂ ಸ್ಥಳೀಯ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ ಎಂದು ಚಂದಾವರಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಿ.ಕೆ. ಮಾಳಶೆಟ್ಟಿ, ಎಸ್.ಎ. ಹೊಳೆಯಣ್ಣವರ, ಜಿ.ಕೆ. ತಮ್ಮಣ್ಣವರ, ಎಂ.ಡಿ. ದೇಸಾಯಿಗೌಡ್ರ, ಎಚ್.ಬಿ. ಶಿರಗುಂಪಿ, ಸಿ.ಬಿ. ಸೊಲಬಣ್ಣವರ, ಎಸ್.ಬಿ. ಸಿದ್ದನಗೌಡ್ರ, ವೈ.ಕೆ. ಪಿಡಗಣ್ಣವರ, ಡಾ. ರಾಜೇಂದ್ರ ಗಡಾದ ಮುಂತಾದವರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin