6 ಮಂದಿ ದರೋಡೆಕೋರರ ಬಂಧನ : 13 ಲಕ್ಷ ರೂ. ಚಿನ್ನ, ಬೆಳ್ಳಿ, ವಶ 

ಈ ಸುದ್ದಿಯನ್ನು ಶೇರ್ ಮಾಡಿ

CHIKKABALAPURA

ಚಿಕ್ಕಬಳ್ಳಾಪುರ, ಮಾ.28-ದರೋಡೆ ಪ್ರಕರಣದಲ್ಲಿ ಆರು ಮಂದಿ ದರೋಡೆಕೋರರನ್ನು ಬಂಧಿಸುವಲ್ಲಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಅವರಿಂದ 13 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ.ಮದನಪಲ್ಲಿ ವಜೀರ್ (32), ಅನಂತಪುರ ಜಿಲ್ಲೆ ಕದ್ರಿಯ ಕೆ.ಮೋಹನ್(21), ಬಾಗೇಪಲ್ಲಿ ಶ್ರೀನಿವಾಸ್ (20), ಆಂಧ್ರದ ಹಿಂದೂಪುರ ನರಸಯ್ಯ (38), ಆಂಧ್ರದ ಗಾಂಧಿನಗರದ ಕೇಶವ (32), ಕೊತ್ತಚೆರುವಿನ ಸುಬಾನ್ (43) ಬಂಧಿತ ಆರೋಪಿಗಳು.ಮಾ.17 ರಂದು ಪ್ರಶಾಂತ್‍ನಗರದ ಮೇಸ್ತ್ರೀ ವೆಂಕಟಪ್ಪ ಎಂಬುವರ ಮನೆಯಲ್ಲಿ ದರೋಡೆ ನಡೆದಿತ್ತು. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಎಸ್ಪಿ ಕಾರ್ತಿಕ್‍ರೆಡ್ಡಿ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು.ಈ ತಂಡ ಪ್ರಶಾಂತ್‍ನಗರದ ಬಾಲಕಿಯರ ಹಾಸ್ಟೆಲ್ ಬಳಿ ಮತ್ತೊಂದು ದರೋಡೆಗೆ ಹೊಂಚು ಹಾಕುತ್ತಿದ್ದ ತಂಡದ ಸುಳಿವು ಪಡೆದು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಡಿವೈಎಸ್ಪಿ ಪುರುಷೋತ್ತಮ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ 13 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಂಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin