ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-04-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ವಯಸ್ಸಾದ ಮೇಲೆ ಯಾವುದರಿಂದ ಸುಖವಾಗಿರಲು ಸಾಧ್ಯವೋ ಅದನ್ನು ಪೂರ್ವ ವಯಸ್ಸಿನಲ್ಲಿ ಮಾಡಬೇಕು. ಪರಲೋಕದಲ್ಲಿ ಯಾವುದರಿಂದ ಸುಖ ಉಂಟೋ ಅಂಥ ಕೆಲಸವನ್ನು ಬದುಕಿರುವಾಗ ಮಾಡಬೇಕು.  -ಮಹಾಭಾರತ,

Rashi

ಪಂಚಾಂಗ : ಶನಿವಾರ, 01.04.2017

ಸೂರ್ಯ ಉದಯ ಬೆ.06.16 / ಸೂರ್ಯ ಅಸ್ತ ಸಂ.06.31
ಚಂದ್ರ ಉದಯ ಬೆ.09.51 / ಚಂದ್ರ ಅಸ್ತ ರಾ.10.52
ಹೇವಿಳಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ
ಶುಕ್ಲ ಪಕ್ಷ / ತಿಥಿ : ಪಂಚಮಿ (ಸಾ.05.50) / ನಕ್ಷತ್ರ: ರೋಹಿಣಿ (ರಾ.02.54)
ಯೋಗ: ಆಯುಷ್ಮಾನ್ (ರಾ.12.27) / ಕರಣ: ಭವ-ಬಾಲವ-ಕೌಲವ (ಬೆ.07.14-ಸಾ.05.50-ರಾ.04.31) / ಮಳೆ ನಕ್ಷತ್ರ: ರೇವತಿ / ಮಾಸ: ಮೀನ / ತೇದಿ: 19

ರಾಶಿ ಭವಿಷ್ಯ :

ಮೇಷ : ಧನ ಸಂಗ್ರಹಕ್ಕೆ ನಾನಾ ಮಾರ್ಗಗಳು ಗೋಚರಿಸ ಲಿವೆ, ವಿದ್ಯಾರ್ಥಿಗಳ ಪ್ರಯತ್ನಬಲ ಸಾರ್ಥಕವಾಗಲಿದೆ
ವೃಷಭ : ರಾಜಕೀಯ ವರ್ಗದವರಲ್ಲಿ ಗೊಂದಲವಿರುತ್ತದೆ
ಮಿಥುನ: ನಿರುದ್ಯೋಗಿಗಳಿಗೆ ಕೆಲಸ ಕೈ ತಪ್ಪುವ ಭಯವಿದೆ
ಕಟಕ : ದಾಯಾದಿಗಳ ಬಗ್ಗೆ ಹೆಚ್ಚು ಜಾಗ್ರತೆ ಇರಲಿ
ಸಿಂಹ: ಕಷ್ಟ-ಕೋಟಲೆಗಳ ನಡುವೆ ಸುಖಾನುಭೂತಿ ಇರಬೇಕು
ಕನ್ಯಾ: ಆಗಾಗ ಅಡಚಣೆಗಳು ತೋರಿಬಂದರೂ ಮನೋ ಬಲದಿಂದ ಎದುರಿಸಬೇಕಾಗುತ್ತದೆ
ತುಲಾ: ವಾಣಿಜ್ಯ ವ್ಯಾಪಾರಿಗಳಿಗೆ ಅಧಿಕ ಲಾಭವಿರುತ್ತದೆ
ವೃಶ್ಚಿಕ : ಆಕಸ್ಮಿಕ ಧನ ಲಾಭ, ಅನಿರೀಕ್ಷಿತ ಶುಭವಾರ್ತೆ ಕೇಳುವಿರಿ
ಧನುಸ್ಸು: ಸಾಂಸಾರಿಕವಾಗಿ ಭಿನ್ನಾಭಿಪ್ರಾಯದಿಂದ ಕಿರಿಕಿರಿ
ಮಕರ: ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತ ಹೋಗ ಲಿದೆ, ರಾಜಕೀಯದಲ್ಲಿ ಉತ್ತಮ ಸ್ಥಾನಮಾನ ಸಿಗಲಿದೆ
ಕುಂಭ: ನಿರೀಕ್ಷಿತ ಕೆಲಸ-ಕಾರ್ಯಗಳು ಶೀಘ್ರವಾಗಿ ನಡೆಯಲಿವೆ, ಹಣಕಾಸಿನ ಬಗ್ಗೆ ಚಿಂತೆ ಇರದು
ಮೀನ: ಮೇಲಧಿಕಾರಿಗಳಿಂದ ಕಾರ್ಯ ಒತ್ತಡ, ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶವಿರುತ್ತದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin