ಐಪಿಎಲ್: ಆರ್‍ಸಿಬಿಗೆ ಆರಂಭಿಕ ವಿಘ್ನ, ಎಸ್‍ಆರ್‍ಎಚ್ ಪಂದ್ಯದತ್ತ ಎಲ್ಲರ ಚಿತ್ತ

ಈ ಸುದ್ದಿಯನ್ನು ಶೇರ್ ಮಾಡಿ

Kohli-011

ಬೆಂಗಳೂರು, ಏ.1- ಕಳೆದ ಬಾರಿಯ ಐಪಿಎಲ್ ರನ್ನರ್ ಅಪ್ ಆಗಿ ಬಿಂಬಿತಗೊಂಡಿರುವ ಆರ್‍ಸಿಬಿಗೆ ಈ ಆವೃತ್ತಿಯ ಆರಂಭದಲ್ಲೇ ಆರಂಭಿಕ ವಿಘ್ನ ಎದುರಾಗಿದ್ದು ಎಲ್ಲರ ಚಿತ್ತ ಸನ್‍ರೈಸರ್ಸ್ ಹೈದ್ರಾಬಾದ್ ವಿರುದ್ಧ ಏ.5 ರಂದು ನಡೆಯಲಿರುವ ಪಂದ್ಯದತ್ತ ಎಲ್ಲರ ಚಿತ್ತ ಹರಿದಿದೆ.  ಆಸ್ಟ್ರೇಲಿಯಾ ವಿರುದ್ಧದ ರಾಂಚಿ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದ ಈಗಾಗಲೇ ಕೆಲವು ಪಂದ್ಯಗಳಿಂದ ಬಹುತೇಕ ಹೊರಗುಳಿಯಲಿರುವ ಆರ್‍ಸಿಬಿ ನಾಯಕ ವಿರಾಟ್ ಕೊಹ್ಲಿಯ ಬೆನ್ನಲ್ಲೇ ಸ್ಫೋಟಕ ಆಟಗಾರ ಕೆ.ಎಲ್.ರಾಹುಲ್ ಕೂಡ ಐಪಿಎಲ್ 10ರ ಸಂಪೂರ್ಣ ಆವೃತ್ತಿಯಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ.

ಆಸ್ಟ್ರೇಲಿಯಾ ವಿರುದ್ಧದ 4ನೆ ಟೆಸ್ಟ್‍ನ ಆರಂಭಿಕ ಪಂದ್ಯದಲ್ಲೇ ಭುಜದ ನೋವಿನಿಂದ ಬಳಲಿದರೂ ಕೂಡ ಅಂತಿಮ ಟೆಸ್ಟ್‍ನವರೆಗೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಹುಲ್ ಸರಣಿಯಲ್ಲಿ 393ರನ್ನುಗಳನ್ನು ಗಳಿಸಿ ಟೆಸ್ಟ್ ರ್ಯಾಂಕಿಂಗ್‍ನಲ್ಲಿ 11ನೆ ಸ್ಥಾನವನ್ನು ಭದ್ರಪಡಿಸಿಕೊಂಡರು.
2016ರ ಐಪಿಎಲ್‍ನ ಆರಂಭಿಕ ಪಂದ್ಯಗಳಲ್ಲೂ ಕೂಡ ಗಾಯದ ಸಮಸ್ಯೆಯಿಂದ 4 ಪಂದ್ಯಗಳನ್ನು ಕಳೆದುಕೊಂಡರೂ ಕೂಡ ತಂಡದಲ್ಲಿದ್ದ ಬ್ಯಾಟಿಂಗ್ ಮಾಂತ್ರಿಕರಾದ ಕ್ರಿಸ್‍ಗೇಲ್, ವಿರಾಟ್ ಕೊಹ್ಲಿ , ಎಡಿಬಿವಿಲಿಯರ್ಸ್‍ರಂತಹ ಅನುಭವಿಗಳ ನೆರವಿನಿಂದ ಟೂರ್ನಿಯಲ್ಲಿ (12 ಪಂದ್ಯಗಳಿಂದ 397 ರನ್) ಗಳಿಸಿ ಮಿಂಚಿದ್ದರು.

ಕೊಹ್ಲಿ , ರಾಹುಲ್‍ರ ಅನುಪಸ್ಥಿತಿಯಿಂದ ಸ್ಥಳೀಯ ಆಟಗಾರರಾದ ಸರ್ಫಾಜ್‍ಖಾನ್, ಮನ್‍ದೀಪ್ ಹಾಗೂ ವಿಕೆಟ್ ಕೀಪರ್ ಕೇದಾರ್ ಜಾಧವ್‍ರ ಮೇಲೆ ಸಾಕಷ್ಟು ಹೊರೆ ಬೀಳಲಿದೆ.  ಐಪಿಎಲ್ 10ರ ಆವೃತ್ತಿಯಿಂದ ಸಂಪೂರ್ಣ ಹೊರಗುಳಿಯುವ ಕೆ.ಎಲ್.ರಾಹುಲ್ ಚಾಂಪಿಯನ್ಸ್ ಟ್ರೋಫಿ ಸರಣಿಯ ವೇಳೆಗೆ ಸಂಪೂರ್ಣವಾಗಿ ಚೇತರಿಸಿಕೊಂಡು ತಂಡವನ್ನು ಸೇರಿಕೊಳ್ಳುವ ಸೂಚನೆ ಸಿಕ್ಕಿದೆ. ಜುಲೈ , ಆಗಸ್ಟ್‍ನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧ ನಡೆಯಲಿರುವ 3
ಟೆಸ್ಟ್ , 5 ಏಕದಿನ ಹಾಗೂ ಏಕಮೇವ ಟ್ವೆಂಟಿ-20 ಪಂದ್ಯಕ್ಕೂ ರಾಹುಲ್ ಲಭ್ಯವಾಗಲಿದ್ದಾರೆ. ಆದರೆ ಕೆ.ಎಲ್.ರಾಹುಲ್ ಐಪಿಎಲ್ 10ರಲ್ಲಿ ಪಾಲ್ಗೊಳ್ಳುತ್ತಾರೋ ಇಲ್ಲವೋ ಎಂಬುದರ ಬಗ್ಗೆ ಆರ್‍ಸಿಬಿ ತಂಡದ ತರಬೇತುದಾರ ಕಿವೀಸ್‍ನ ಡೇನಿಯಲ್ ವಿಟ್ಟೋರಿ, ಆಡಳಿತ ಮಂಡಳಿಯವರು ಇದರ ಬಗ್ಗೆ ಪ್ರತಿಕ್ರಿಯಿಸಿಲ್ಲ.

 

ಎಬಿಡಿ, ಕೇದಾರ್‍ಗೆ ಹೆಚ್ಚಿನ ಹೊರೆ:

ಗಾಯದ ಸಮಸ್ಯೆಯಿಂದ ಕೆಲವು ಪಂದ್ಯಗಳಿಂದ ವಿರಾಟ್ ಕೊಹ್ಲಿ ಹೊರಗುಳಿಯಲಿರುವುದರಿಂದ ಹಂಗಾಮಿ ನಾಯಕನಾಗಿ ಸ್ಫೋಟಕ ಆಟಗಾರ ಎಬಿಡಿವಿಲಿಯರ್ಸ್ ವಹಿಸಿಕೊಳ್ಳುವುದರಿಂದ ಹಾಗೂ ಕರ್ನಾಟಕದ ವಿಕೆಟ್‍ಕೀಪರ್ ಮತ್ತು ಬ್ಯಾಟ್ಸ್‍ಮನ್ ಕೆ.ಎಲ್.ರಾಹುಲ್‍ರ ಗೈರುಹಾಜರಿಯ ಬೆನ್ನಲ್ಲಿ ಮಹಾರಾಷ್ಟ್ರದ ವಿಕೆಟ್ ಕೀಪರ್ ಕೇದಾರ್ ಜಾಧವ್‍ಗೆ ಹೆಚ್ಚಿನ ಹೊರೆ ಬೀಳಲಿದೆ.  ಪ್ರಿಲ್ 5 ರಂದು ಆರಂಭವಾಗಲಿರುವ ಐಪಿಎಲ್ ಚಾಂಪಿಯನ್ಸ್ ಸನ್‍ರೈಸರ್ಸ್ ಹೈದ್ರಾಬಾದ್ ತಂಡದ ವಿರುದ್ಧದ ಪಂದ್ಯದ ಮೇಲೆ ಎಲ್ಲರ ಚಿತ್ತ ಹರಿದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin