ಛತ್ತೀಸ್‍ಗಢದಲ್ಲಿ 33 ಮಾವೋವಾದಿ ನಕ್ಸಲರ ಶರಣಾಗತಿ

ಈ ಸುದ್ದಿಯನ್ನು ಶೇರ್ ಮಾಡಿ

33-Naxals

ರಾಯ್‍ಪುರ್, ಏ.1-ಎರಡು ಮಹತ್ವದ ಬೆಳವಣಿಗೆಯೊಂದರಲ್ಲಿ ಛತ್ತೀಸ್‍ಗಢದ ಬಸ್ತಾರ್‍ನಲ್ಲಿ 33 ಮಂದಿ ಮಾವೋವಾದಿ ನಕ್ಸಲರು ಶರಣಾಗಿದ್ದರೆ, ಇನ್ನಿಬ್ಬರು ಕುಖ್ಯಾತ ಬಂಡುಕೋರರನ್ನು ಸೆರೆ ಹಿಡಿಯಲಾಗಿದೆ.   ನಾಲ್ವರು ಮಹಿಳೆಯರೂ ಸೇರಿದಂತೆ 33 ನಕ್ಸಲರು ನಿನ್ನೆ ಜಿಲ್ಲಾ ಕೇಂದ್ರ ಜಗದಾಳ್‍ಪುರದಲ್ಲಿ ಬಸ್ತಾರ್ ವಲಯ ಪೊಲೀಸ್ ಮಹಾ ನಿರೀಕ್ಷಕ (ಐಜಿ) ಪಿ. ಸುಂದರ್‍ರಾಜ್, ಕಲೆಕ್ಟರ್ ಅಮಿತ್ ಕಟಾರಿಯಾ ಮತ್ತು ಇತರ ಉನ್ನತಾಧಿಕಾರಿಗಳ ಮುಂದೆ ಶರಣಾಗತರಾಗಿದ್ದಾರೆ. ಶರಣಾಗತರಾದವರಲ್ಲಿ ನಾಲ್ವರ ತಲೆಗೆ ತಲಾ 1 ಲಕ್ಷ ರೂ.ಗಳ ಬಹುಮಾನ ಘೋಷಿಸಲಾಗಿತ್ತು. ಇವರು ಅನೇಕ ನಕ್ಸಲ್ ದಾಳಿಗಳಲ್ಲಿ ಸಕ್ರಿಯವಾಗಿ ಶಾಮೀಲಾಗಿದ್ದರು.

ಬಂಡುಕೋರರು ಶಸ್ತ್ರಾಸ್ತ್ರಗಳನ್ನು ಬದಿಗಿಟ್ಟು ಸಮಾಜದ ಮುಖ್ಯವಾಹಿನಿಗೆ ಬಂದಿರುವುದು ಸಂತೋಷದ ಸಂಗತಿ ಎಂದಿರುವ ಐಜಿಪಿ, ಶರಣಾದ ಪ್ರತಿಯೊಬ್ಬರಿಗೂ ತಕ್ಷಣಕ್ಕೆ ತಲಾ 10,000 ರೂ.ಗಳ ಆರ್ಥಿಕ ನೆರವು ಮತ್ತು ಸರ್ಕಾರ ನಿಯಮದಂತೆ ಪುನರ್ವಸತಿ ಕಲ್ಪಿಸುವುದಾಗಿ ತಿಳಿಸಿದ್ದಾರೆ. ಈ ಮಧ್ಯೆ ಬಿಜಾಪುರ್ ಪೊಲೀಸರು ಇಬ್ಬರು ನಕ್ಸಲರನ್ನು ಬಂಧಿಸಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin