ಮನೆಯ ಪಾಯ ಅಗೆಯುವಾಗ ಬಿಂದಿಗೆಯೊಂದರಲ್ಲಿ 82 ಚಿನ್ನದ ನಾಣ್ಯಗಳು ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ
ಉದ್ಯೋಗ ಮಾಹಿತಿ
ಉದ್ಯೋಗ ಮಾಹಿತಿ

ಗದಗ,ಏ.1-ಮನೆಯ ಪಾಯ ಅಗೆಯುವಾಗ ಚಿನ್ನದ ನಾಣ್ಯಗಳು ಪತ್ತೆಯಾಗಿರುವ ಘಟನೆ ಗದಗ ಜಿಲ್ಲೆ ಮುಳಗುಂದ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಶೋಭಾ ಹಿರೇಮಠ್ ಎಂಬುವರಿಗೆ  ಸೇರಿದ ನಿವೇಶನದಲ್ಲಿ ಮನೆ ನಿರ್ಮಿಸಲು ಪಾಯ ಅಗೆಯುವ ಕೆಲಸ ನಡೆಯುತ್ತಿತ್ತು. ಸುಮಾರು 6 ಅಡಿ ಆಳದಲ್ಲಿ ತಾಮ್ರದ ಬಿಂದಿಗೆಯೊಂದರಲ್ಲಿ 82 ನಾಣ್ಯಗಳು ಪತ್ತೆಯಾಗಿವೆ.  ನಂತರ ಅದನ್ನು ತೆಗೆದುಕೊಂಡು ಮನೆ ಹೋಗಿ ಪರೀಕ್ಷಿಸಿದಾಗ ಅದು ಚಿನ್ನ ಎಂದು ಗೊತ್ತಾಗುತ್ತಿದ್ದಂತೆ ಕೆಲಸಗಾರರು ಇಂತಿಷ್ಟು ಹಣ ಕೊಟ್ಟು ಈ ವಿಷಯವನ್ನು ಯಾರಿಗೂ ತಿಳಿಸಿದಂತೆ ಹೇಳಲಾಗಿತ್ತು.

ಆದರೆ ಕೂಲಿಕಾರ್ಮಿಕನೊಬ್ಬ ಒಂದೆರಡು ನಾಣ್ಯಗಳನ್ನು ಇಟ್ಟುಕೊಂಡಿದ್ದ. ಅದನ್ನು ಮಾರಾಟ ಮಾಡಲು ಪ್ರಯತ್ನಿಸುವಾಗ ಅನುಮಾನ ಬಂದು ಆತನನ್ನು ಕೆಲವರು ವಿಚಾರಿಸಿದಾಗ ನಿಧಿ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.   ನಂತರ ಪೊಲೀಸರಿಗೂ ವಿಷಯ ಗೊತ್ತಾಗಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ನಂತರ ಮಾಲೀಕರಿಗೆ ತಿಳಿಹೇಳಿ ಸುಮಾರು 280 ಗ್ರಾಂ ಚಿನ್ನದ ನಾಣ್ಯಗಳನ್ನು ವಶಕ್ಕೆ ಪಡೆದಿದ್ದಾರೆ. ಮುಳಗುಂದ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಮಾಹಿತಿ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin