ರಿಯಲ್ ಎಸ್ಟೇಟ್ ಕುಳ ವಂಚಕ ಸಂಜಯ್ ಚಂದ್ರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Sanjay-Chandra-01

ನವದೆಹಲಿ, ಏ.1-ಫ್ಲಾಟ್‍ಗಳನ್ನು ನೀಡುವುದಾಗಿ ಗ್ರಾಹಕರಿಂದ ಕೋಟ್ಯಂತರ ರೂಪಾಯಿ ಪಡೆದ ವಂಚಸಿದ ಆರೋಪದ ಮೇಲೆ ರಿಯಲ್ ಎಸ್ಟೇಟ್ ಸಂಸ್ಥೆ ಯೂನಿಟೆಕ್ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಚಂದ್ರ ಮತ್ತು ಆತನ ಸಹೋದರ ಅಜಯ್ ಚಂದ್ರನನ್ನು ಇಂದು ಮುಂಜಾನೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.  ದೆಹಲಿ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧಗಳ ಘಟಕದ ಅಧಿಕಾರಿಗಳು ಬಂಧಿಸಿದರು.

ಗ್ರೇಟರ್ ನೊಯ್ಡಾ ಯೋಜನೆಯಲ್ಲಿ ಗ್ರಾಹಕರಿಗೆ ಪ್ಲಾಟ್‍ಗಳನ್ನು ನೀಡುವುದಾಗಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ ಸಂಜಯ್, ಒಪ್ಪಂದ ಉಲ್ಲಂಘಿಸಿ ಮನೆಗಳನ್ನು ನೀಡದೇ ವಂಚಿಸಿದ್ದರು ಈ ಸಂಬಂಧ ಅನೇಕ ಮಂದಿ ನೀಡಿದ ದೂರಿನ ಮೇರೆಗೆ ಸಂಜಯ್ ಮತ್ತು ಅಜಯ್ ಅವರನ್ನು ಬಂಧಿಸಲಾಗಿದೆ.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಜನವರಿಯಲ್ಲಿ ಸಂಜಯ್, ಅಜಯ್, ಯೂನಿಟೆಕ್ ಲಿಮಿಟೆಡ್‍ನ ಅಧ್ಯಕ್ಷ ರಮೇಶ್ ಚಂದ್ರ ಮತ್ತು ನಿರ್ದೇಶಕ ಮಿನೋಟಿ ಬಾಹ್ರಿ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin