ವಾಣಿಜ್ಯ ವಂಚಕರ ನಿಗ್ರಹಕ್ಕೆ ಟ್ರಂಪ್ ಅವಳಿ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

Trump--01

ವಾಷಿಂಗ್ಟನ್, ಏ.1-ವಾಣಿಜ್ಯ ವಂಚಕರನ್ನು ಮಟ್ಟ ಹಾಕಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ಮಹತ್ವದ ಕಾರ್ಯಕಾರಿ ಆದೇಶಗಳಿಗೆ ಸಹಿ ಮಾಡಿದ್ದಾರೆ. ಚೀನಾ ಮತ್ತು ಭಾರತ ಸೇರಿದಂತೆ 16 ರಾಷ್ಟ್ರಗಳೊಂದಿಗೆ ವಾರ್ಷಿಕ 500 ಶತಕೋಟಿ ಡಾಲರ್‍ಗಳಿಗೂ ಹೆಚ್ಚು ಮೊತ್ತದ ಭಾರೀ ವ್ಯಾಪಾರ-ವಹಿವಾಟು ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಅದಕ್ಕೆ ಕಾರಣವಾಗಿರುವ ಅಂಶಗಳ ಸಮಗ್ರ ಪರಾಮರ್ಶೆ ಉದ್ದೇಶದ ಆದೇಶಕ್ಕೂ ಸಹ ಟ್ರಂಪ್ ಅಂಕಿತ ಹಾಕಿದ್ದಾರೆ.

ದೊಡ್ಡ ಮಟ್ಟದಲ್ಲಿ ವಂಚನೆ ಎಸಗುತ್ತಿರುವ ವಿದೇಶಿ ಅಮದುದಾರರಿಂದ ಎಲ್ಲ ತೆರಿಗೆಗಳನ್ನು ಸಂಗ್ರಹಿಸಲು ಅಮೆರಿಕಾಗೆ ಅವಕಾಶ ನೀಡುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷರು ರುಜು ಮಾಡಿದ್ದು, ಆ ಮೂಲಕ ದೇಶದಲ್ಲಿ ಮೋಸ ಮತ್ತು ಅಕ್ರಮ ವಹಿವಾಟಿಗೆ ಕಡಿವಾಣ ಹಾಕಲು ಉದ್ದೇಶಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin