KSRTC ಬಸ್’ಗೆ ಬೆಂಕಿ : ಚಾಲಕನ ಸಮಯ ಪ್ರೆಜ್ಞೆಯಿಂದ ತಪ್ಪಿದ ಭಾರೀ ಅನಾಹುತ

ಈ ಸುದ್ದಿಯನ್ನು ಶೇರ್ ಮಾಡಿ

KSRTC--Bus

ಸಕಲೇಶ್ವರ,ಏ.1-ಶಾರ್ಟ್ ಸರ್ಕ್ಯೂಟ್ ನಿಂದ ಕೆ ಆರ್ ಟಿ ಸಿ ಬಸ್ ಗೆ ಬೆಂಕಿ ತಗುಲಿ ಹೊತ್ತಿ  ಉರಿದಿದ್ದು , ಚಾಲಕನ ಸಮಯ ಪ್ರೆಜ್ಞೆಯಿಂದ   ಭಾರೀ  ಅನಾಹುತ ತಪ್ಪಿದೆ. ಧರ್ಮಸ್ಥಳದಿಂದ ಬೆಂಗಳೂರಿಗೆ ಬರುತ್ತಿದ್ದ ಕೆ ಆರ್ ಟಿ ಸಿ ಬಸ್  ಗೆ ಸಕಲೇಶ್ವರ ತಾಲೂಕು ಮಾರನಹಳ್ಳಿ ಸಮೀಪ ಆಕಸ್ಮಿಕವಾಗಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ನಿಂದ ಬಸ್ ನಲ್ಲಿ  ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಪ್ರಯಾಣಿಕರನ್ನು ತಕ್ಷಣ ಕೆಳೆಗೆ ಇಳಿಯುವಂತೆ ಸೂಚಿಸಿ ಇದರಿಂದ ಸಂಭವಿಸಬಹುದಾದ ಭಾರೀ ಅನಾವುತ ತಪ್ಪಿಸಿ ಕರ್ತವ್ಯ ನಿಷ್ಠೆ  ಮೆರೆದಿದ್ದಾನೆ .

ಬೆಂಕಿಯಿಂದ ಬಸ್ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು ,ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ  ಸಂಭವಿಸಿಲ್ಲ .ಇದರಿಂದ ಪ್ರಯಾಣಿಕರು  ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ .

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin