ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ಹೆಚ್ಚುವರಿಯಾಗಿ 10 ಕೋಟಿ ಹಣ

ಈ ಸುದ್ದಿಯನ್ನು ಶೇರ್ ಮಾಡಿ

Police-Flag-Day--1
ಬೆಂಗಳೂರು, ಏ.2- ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ಇನ್ನೂ 10 ಕೋಟಿ ಹೆಚ್ಚುವರಿ ಹಣ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕೋರಮಂಗಲದಲ್ಲಿರುವ ಕೆಎಸ್‍ಆರ್‍ಪಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪದಕ ವಿಜೇತ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಪದಕ ವಿತರಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಹೆಚ್ಚಿನ ಸೌಲಭ್ಯ ಕೊಡಲು ಬದ್ಧವಾಗಿದೆ. ಹೀಗಾಗಿ ವರ್ಷಕ್ಕೆ ಒಂದು ಸಾವಿರ ಆರೋಗ್ಯ ತಪಾಸಣಾ ಭತ್ಯೆ ನೀಡಲಾಗುತ್ತಿದೆ.

Police-Flag-Day--2

ಪೊಲೀಸ್ ಮಕ್ಕಳಿಗಾಗಿ ಪ್ರತ್ಯೇಕ ಶಾಲೆ ಮತ್ತು ಪೊಲೀಸರಿಗೆ ಪ್ರತ್ಯೇಕ ಕ್ಯಾಂಟೀನ್ ವ್ಯವಸ್ಥೆಯನ್ನು ಆರಂಭಿಸಲಾಗಿದೆ. 25 ವರ್ಷಗಳಿಂದಲೂ ಬಡ್ತಿ ಇಲ್ಲದೆ ಕೆಲಸ ಮಾಡುತ್ತಿದ್ದ ಸುಮಾರು 12 ಸಾವಿರ ಸಿಬ್ಬಂದಿ ಕಾನ್‍ಸ್ಟೆಬಲ್‍ನಿಂದ ಹೆಡ್‍ಕಾನ್‍ಸ್ಟೆಬಲ್, ಹೆಡ್‍ಕಾನ್‍ಸ್ಟೆಬಲ್‍ನಿಂದ ಎಎಸ್‍ಐ ಹುದ್ದೆಗೆ ಬಡ್ತಿ ನೀಡಲಾಗಿದೆ. 200ರೂ.ಗಳಷ್ಟಿದ್ದ ಭತ್ಯೆಯನ್ನು 2ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಪೊಲೀಸರು ಗೌರವದಿಂದ ಬದುಕಬೇಕು. ಅವರ ಮಕ್ಕಳಿಗೂ ಉತ್ತಮ ಭವಿಷ್ಯ ಸಿಗಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶ ಎಂದರು.

Police-Flag-Day--6

ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣಕ್ಕೆ ಈಗಾಗಲೇ 10 ಕೋಟಿ ನೀಡಲಾಗಿದ್ದು, ಅದು ಸಾಲುವುದಿಲ್ಲ. ಇನ್ನೂ 10 ಕೋಟಿ ಬೇಕು ಎಂಬ ಬೇಡಿಕೆ ಬಂದಿದೆ. ರಾಜ್ಯ ಸರ್ಕಾರ ಅವರ ಬೇಡಿಕೆಯಂತೆ 10 ಕೋಟಿಗಳನ್ನು ಬಿಡುಗಡೆ ಮಾಡಲಿದೆ. ಈ ಮೂಲಕ ನಿವೃತ್ತ ಪೊಲೀಸ್ ಅಧಿಕಾರಿಗಳ ರಿವಾಲ್ವಿಂಗ್ ಫಂಡ್ 20 ಕೋಟಿರೂ.ಗಳಷ್ಟಾಗಲಿದೆ ಎಂದು ಹೇಳಿದರು. ಈ ಮೊದಲು ಕೆ.ಜೆ.ಜಾರ್ಜ್ ಗೃಹ ಸಚಿವರಾಗಿದ್ದಾಗ ಪ್ರತಿ ಬಾರಿ ಪೊಲೀಸ್ ಧ್ವಜ ದಿನಾಚರಣೆ ವೇಳೆ ಸಿಎಂ ಸಿದ್ದರಾಮಯ್ಯ ಪೊಲೀಸ್ ಸಿಬ್ಬಂದಿಗಳು ಹಾಗೂ ಅಧಿಕಾರಿಗಳನ್ನು ಹೊಸ ಯೋಜನೆಗಳನ್ನು ಘೋಷಿಸುತ್ತಿದ್ದರು.

Police-Flag-Day--3

ಮೂರ್ನಾಲ್ಕು ವರ್ಷದಿಂದ ಈ ಸಂಪ್ರದಾಯ ನಡೆದು ಬಂದಿತ್ತು. ಈ ಬಾರಿ ಉಪ ಚುನಾವಣೆ ದೃಷ್ಠಿಯಿಂದ ಪೊಲೀಸರಿಗೆ ಯಾವುದೇ ಹೊಸ ಯೋಜನೆಗಳು ಘೋಷಣೆಯಾಗಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Police-Flag-Day--4

Police-Flag-Day--5

Facebook Comments

Sri Raghav

Admin