ಪಾಯ ತೆಗೆಯುವಾಗ ಮಣ್ಣಲ್ಲಿ ಸಿಕ್ತು ಯುವಕನ ಡೆಡ್ ಬಾಡಿ..!

ಈ ಸುದ್ದಿಯನ್ನು ಶೇರ್ ಮಾಡಿ

Dead-Body

ಬೆಂಗಳೂರು, ಏ.2- ಯುವಕ ನೊಬ್ಬನನ್ನು ಕೊಲೆ ಮಾಡಿ ಪಾಯದ ಮಣ್ಣಿನಲ್ಲಿ ಶವ ಹೂತು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.  ಮೀನಾಕ್ಷಿ ದೇವಾಲಯ ಸಮೀಪ ಕಟ್ಟಡ ಕಟ್ಟಲು ಪಾಯ ತೆಗೆದಿದ್ದು, ನಿನ್ನೆ ಅಗೆದ ಮಣ್ಣನ್ನು ಗುಂಡಿಗೆ ತುಂಬುವಾಗ ಯುವಕನ ಶವ ಪತ್ತೆಯಾಗಿದೆ.  ಸುಮಾರು 25 ರಿಂದ 30 ವರ್ಷದ ಯುವಕನನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ಶವವನ್ನು ತಂದು ಪಾಯದ ಮಣ್ಣಲ್ಲಿ ಹೂತು ಪರಾರಿಯಾಗಿದ್ದಾರೆ. ನಿನ್ನೆ ರೆವಿನ್ಯೂ ಅಧಿಕಾರಿಗಳ ಸಮಕ್ಷಮದಲ್ಲಿ ಶವವನ್ನು ಹೊರ ತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಯಲ್ಲಿಡಲಾಗಿದೆ. ಈ ಸಂಬಂಧ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin