ಸಲ್ಮಾನ್‍-ಲುಲಿಯಾ ನಡುವೆ ಕುಚ್ ತೊ ಹೈ..!

ಈ ಸುದ್ದಿಯನ್ನು ಶೇರ್ ಮಾಡಿ

Salman-Kahan

ಬಾಲಿವುಡ್ ಸೂಪರ್‍ಸ್ಟಾರ್ ಸಲ್ಮಾನ್ ಖಾನ್ ಮತ್ತು ರೊಮಾನಿಯಾ ಚೆಲುವೆ ಲುಲಿಯಾ ವಂಟೂರ್ ಮತ್ತೆ ಸುದ್ದಿಯಲ್ಲಿದ್ದಾರೆ. ನನ್ನ-ಸಲ್ಲು ನಡುವೆ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಲೇ ಬಂದಿರುವ ಲುಲಿಯಾ ಸಲ್ಲು ಜೊತೆ ಮತ್ತೆ ಕಾಣಿಸಿಕೊಂಡಿರುವುದು ಹಲವು ಊಹಾಪೋಹಾಗಳಿಗೆ ಎಡೆ ಮಾಡಿಕೊಟ್ಟಿದೆ.
ಟೈಗರ್ ಜಿಂದಾ ಹೈ ಸಿನಿಮಾದ ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣಕ್ಕಾಗಿ ಆಸ್ಟ್ರಿಯಾದಲ್ಲಿದ್ದ ಸಲ್ಲು ವಿಮಾನ ಏರಿ ಹಠಾತ್ ದ್ವೀಪರಾಷ್ಟ್ರ ಮಾಲ್ಡಿವ್ಸ್‍ಗೆ ಧಾವಿಸಿದ. ಇದಕ್ಕೆ ಕಾರಣವೂ ಇತ್ತು ಸೂಪರ್‍ಸ್ಟಾರ್ ಕುಟುಂಬ (ಖಾನ್‍ದಾನ್) ಅಲ್ಲಿ ರಜೆ ಪ್ರವಾಸದಲ್ಲಿತ್ತು. ಅಲ್ಲಿಗೆ ಲುಲಿಯಾ ಕೂಡ ಬಂದಿದ್ದಳು. ಹೀಗಾಗಿ ಎಸ್‍ಕೆ ಅಲ್ಲಿಗೆ ಹೋಗಬೇಕಾದುದು ಅನಿವಾರ್ಯವಾಗಿತ್ತು.

ಸಲ್ಮಾನ್‍ಖಾನ್‍ನ ಇಡೀ ಖಾನ್‍ದಾನ್ ಮಾಲ್ಡಿವ್ಸ್‍ನಲ್ಲಿ ಸೇರಿದ್ದು ವಿಶೇಷ. ಸಲ್ಲು ಸಹೋದರಿ ಅರ್ಪಿತಾ ಖಾನ್ ಮತ್ತು ಆಯುಷ್ ಶರ್ಮರ ವಂಶೋದ್ದಾರಕ ಅಹಿಲ್‍ನ ಮೊದಲನೇ ವರ್ಷದ ಹುಟ್ಟುಹಬ್ಬದ ಆಚರಣೆಗೆ ಸಲ್ಲು ಮತ್ತು ಲುಲಿಯಾ ತಾರಾ ಮೆರಗು ನೀಡಿದರು.  ಕುಟುಂಬದ ಹಿರಿಯ ಸದಸ್ಯರಾದ ಸಲೀಂ, ಸಲ್ಮಾ, ಹೆಲೆನ್, ಸಹೋದರ ಅರ್ಬಾಜ್, ಆತನ ಮಾಜಿ ಪತ್ನಿ ಮಲೈಕಾ, ಗೆಳೆಯರಾದ ಸೀಮಾ, ಅರ್‍ಹಾನ್, ನಿರ್ವಾಣ್, ಯೋಹನ್, ಆಯಾನ್, ಅಲ್ವಿರಾ, ಅತುಲ್ ಅಗ್ನಿಹೋತ್ರಿ ದ್ವೀಪರಾಷ್ಟ್ರದ ಐಷಾರಾಮಿ ರೆಸಾರ್ಟ್‍ನಲ್ಲಿ ಸೇರಿದ್ದರು.  ಸಲ್ಲು ತನ್ನ ಕುಟುಂಬದ ಸದಸ್ಯರು ಬಂಧುಮಿತ್ರರೊಂದಿಗೆ ಲುಲಿಯಾ ಜೊತೆ ದೋಣಿ ವಿಹಾರದಲ್ಲಿ ಪಾಲ್ಗೊಂಡ. ಮೋಜಿನ ತಾಣಗಳಿಗೂ ಭೇಟಿ ನೀಡಿ ಖುಷಿ ಪಟ್ಟಿದ್ದಾನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin