ಕಲಬುರಗಿ : ಪೊಲೀಸ್ ಪೇದೆ ಮೇಲೆ ತಲವಾರ್‍ನಿಂದ ಹಲ್ಲೆ ಮಾಡಿದ ರೌಡಿ ಮೇಲೆ ಫೈರಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

gun-firing

ಲಬುರಗಿ, ಏ.3- ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿಯೊಬ್ಬನ ಮೇಲೆ ಫೈರಿಂಗ್ ಮಾಡಿರುವ ಘಟನೆ ಕಲಬುರಗಿ ತಾಲೂಕಿನ ಕೆರೆಬೋಸಗ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.  ಮತ್ತೊಬ್ಬ ರೌಡಿ ಶ್ರೀಕಾಂತ್‍ರೆಡ್ಡಿ ಕೊಲೆ ಯತ್ನ ನಡೆಸಿದ ರೌಡಿ ವಿಕ್ರಮ್‍ನನ್ನು ಪೊಲೀಸರು ಬಂಧಿಸಿದ್ದರು.
ಅವನನ್ನು ಕರೆದುಕೊಂಡು ಕೊಲೆಗೆ ಬಳಸಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ತೆರಳುತ್ತಿದ್ದ ಸಂದರ್ಭ ರೌಡಿ ವಿಕ್ರಮ್ ಮುಖ್ಯಪೇದೆ ಅಂಬಾದಾಸ್ ಎಂಬುವರ ಮೇಲೆ ತಲವಾರ್‍ನಿಂದ ಹಲ್ಲೆ ನಡೆಸಿ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ.

ಈ ವೇಳೆ ಪೊಲೀಸರು ರೌಡಿ ವಿಕ್ರಮ್ ಮೇಲೆ ಗುಂಡು ಹಾರಿಸಿ ಅವನನ್ನು ಮತ್ತೆ ಬಂಧಿಸಿದ್ದಾರೆ.   ಗಾಯಗೊಂಡಿರುವ ಮುಖ್ಯಪೇದೆ ಅಂಬಾದಾಸ್ ಅವರನ್ನು ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.   ರೌಡಿ ವಿಕ್ರಮ್‍ನನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಮಾಲಗತ್ತಿ ಗ್ರಾಮದ ನಿವಾಸಿಯಾಗಿರುವ ರೌಡಿ ವಿಕ್ರಮ್ ಈ ಮೊದಲು ಕೂಡ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin