ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ (03-04-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಚಿಕ್ಕ ವಯಸ್ಸಿನಲ್ಲಿ ಯಾವಾತನು ಶಾಂತನಾಗಿರು ವನೊ ಅವನೀಗ ಶಾಂತನೆಂದು ನನ್ನ ಭಾವನೆ. ಏಕೆಂದರೆ ದೇಹದೊಳಗಿನ ರಸಗಳೆಲ್ಲಾ (ಸಪ್ತಧಾತು) ಕ್ಷಯ ಹೊಂದುತ್ತಿರುವಾಗ ಯಾರಿಗೆ ತಾನೇ ಶಾಂತಿ ಉಂಟಾಗುವುದಿಲ್ಲ. – ಪಂಚತಂತ್ರ, ಮಿತ್ರಭೇದ

Rashi

ಪಂಚಾಂಗ : ಸೋಮವಾರ,03.04.2017

ಸೂರ್ಯ ಉದಯ ಬೆ.06.15 / ಸೂರ್ಯ ಅಸ್ತ ಸಂ.06.31
ಚಂದ್ರ ಉದಯ ಬೆ.11.44 / ಚಂದ್ರ ಅಸ್ತ ರಾ.12.49
ಹೇವಿಳಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ
ಶುಕ್ಲ ಪಕ್ಷ / ತಿಥಿ : ಸಪ್ತಮಿ (ಮ.01.05) / ನಕ್ಷತ್ರ: ಆದ್ರ್ರಾ (ರಾ.11.59)
ಯೋಗ: ಶೋಭನ (ಸಾ.06.29) / ಕರಣ: ವಣಿಜ್-ಭದ್ರೆ (ಮ.01.05-ರಾ.12.10)
ಮಳೆ ನಕ್ಷತ್ರ: ರೇವತಿ / ಮಾಸ: ಮೀನ / ತೇದಿ: 21

ರಾಶಿ ಭವಿಷ್ಯ :

ಮೇಷ : ರಾಜಕೀಯ ವ್ಯಕ್ತಿಗಳಿಗೆ ಅಚ್ಚರಿಯ ಬೆಳವಣಿಗೆ ಇರುತ್ತದೆ, ವೈವಾಹಿಕ ಪ್ರಸ್ತಾವಗಳು ಬಲಗೊಳ್ಳಲಿವೆ
ವೃಷಭ : ನಿರೀಕ್ಷಿತ ಕೆಲಸ-ಕಾರ್ಯಗಳು ಪರಿಪೂರ್ಣ ವಾಗಲಿವೆ, ಯಾವುದಕ್ಕೂ ಜಾಗ್ರತೆ ವಹಿಸುವುದು ಅಗತ್ಯ
ಮಿಥುನ: ಉದ್ಯೋಗಸ್ಥರಿಗೆ ಉತ್ತಮ ಮುನ್ನಡೆ ಇರುತ್ತದೆ
ಕಟಕ : ಚಿಂತೆಗಳು ಆಗಾಗ ಮಹಿಳೆಯರನ್ನು ಕಾಡುತ್ತವೆ, ತಪ್ಪು ತಿಳುವಳಿಕೆಗೆ ಕಾರಣರಾಗದಿರಿ
ಸಿಂಹ: ದಾಂಪತ್ಯ ಜೀವನದಲ್ಲಿ ತಪ್ಪು ಅಭಿಪ್ರಾಯಗಳಿಂದ ಕಿರಿಕಿರಿ
ಕನ್ಯಾ: ಅನಾವಶ್ಯಕವಾಗಿ ನಾನಾ ರೀತಿ ಯಲ್ಲಿ ಖರ್ಚು ಮಾಡುವಂತಾಗುತ್ತದೆ
ತುಲಾ: ಆಗಾಗ ಸಂಶಯ ಪ್ರವೃತ್ತಿಯಿಂದ ಕಾರ್ಯಭಂಗ ವೃಶ್ಚಿಕ : ನಿರುದ್ಯೋಗಿಗಳಿಗೆ ಅಡೆ ತಡೆಗಳಿಂದ ಉದ್ಯೋಗ ಲಾಭ
ಧನುಸ್ಸು: ನಿದ್ರಾಹೀನತೆ ಸಮಸ್ಯೆಗಳಿಂದ ಬಳಲುವ ಸಾಧ್ಯತೆ ಇದೆ, ಧಾರ್ಮಿಕ ಕೆಲಸ-ಕಾರ್ಯಗಳಲ್ಲಿ ಆಸಕ್ತಿ
ಮಕರ: ಸರ್ಕಾರಿ ಕೆಲಸಗಳು ವಿಳಂಬಗತಿಯಲ್ಲಿ ನಡೆಯಲಿವೆ
ಕುಂಭ: ಆರ್ಥಿಕ ಸ್ಥಿತಿ ಉನ್ನತಿ ಪಡೆದರೂ ಆಕಸ್ಮಿಕ ಖರ್ಚು- ವೆಚ್ಚಗಳು ಅಧಿಕ, ಶೀತ, ಕಫದಿಂದ ಅನಾರೋಗ್ಯ
ಮೀನ: ಹಿತಶತ್ರುಗಳು ನಿಮ್ಮನ್ನು ಗಮನಿಸಲಿದ್ದಾರೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin