ಬಿಗ್‍ಬಾಸ್ ವಿಜೇತ ಪ್ರಥಮ್ ಮನೆಯಲ್ಲಿ ಕಳವು : ಕಳ್ಳರಿಗಾಗಿ ತೀವ್ರ ಶೋಧ

ಈ ಸುದ್ದಿಯನ್ನು ಶೇರ್ ಮಾಡಿ

pratham

ಬೆಂಗಳೂರು,ಏ.3- ಬಿಗ್‍ಬಾಸ್ ಖ್ಯಾತಿಯ ಪ್ರಥಮ್ ಮನೆಯಲ್ಲಿ ಲ್ಯಾಪ್‍ಟಾಪ್, ಹಾರ್ಡ್ ಡಿಸ್ಕ್ ದೋಚಿ ಪರಾರಿಯಾಗಿರುವ ಕಳ್ಳರಿಗಾಗಿ ನಂದಿನಿ ಲೇಔಟ್ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.  ಲಗ್ಗೆರೆ ಬಸ್ ನಿಲ್ದಾಣ ಬಳಿ ಪ್ರಥಮ್ ವಾಸವಾಗಿದ್ದು , ಬಿಗ್‍ಬಾಸ್‍ನಲ್ಲಿ ಪಾಲ್ಗೊಳ್ಳಲು ಮನೆಗೆ ಬೀಗ ಹಾಕಿ ಹೋಗಿದ್ದಾಗ ಕಳ್ಳರು ಬೀಗ ಮುರಿದು ಲ್ಯಾಪ್‍ಟಾಪ್, ಹಾರ್ಡ್ ಡಿಸ್ಕ್, ಮೊಬೈಲ್ ಕಳವು ಮಾಡಿದ್ದರು. ಬಿಗ್‍ಬಾಸ್ ಮುಗಿಸಿ ಮನೆಗೆ ವಾಪಸ್ಸಾದಾಗ ಕಳುವಾಗಿರುವುದು ಗೊತ್ತಾಗಿ ನಂದಿನಿ ಲೇಔಟ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin