ಬ್ಯಾಗ್‍ನಲ್ಲಿ 2 ಗ್ರೆನೇಡ್‍ಗಳನ್ನಿಟ್ಟುಕೊಂಡಿದ್ದ ಯೋಧನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Grenades

ಶ್ರೀನಗರ, ಏ.3-ಭದ್ರತಾ ಸಿಬ್ಬಂದಿಯೇ ಬೆಚ್ಚಿ ಬೀಳುವಂತಹ ಘಟನೆಯೊಂದು ಕಾಶ್ಮೀರದ ರಾಜಧಾನಿ ಶ್ರೀನಗರದ ವಿಮಾನನಿಲ್ದಾಣದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಭದ್ರತಾ ಸಿಬ್ಬಂದಿ ಯೋಧನನ್ನು ತಪಾಸಣೆಗೆ ಒಳಪಡಿಸಿದಾಗ ಆತನ ಬ್ಯಾಗ್‍ನಲ್ಲಿ ಎರಡು ಗ್ರೆನೇಡ್‍ಗಳು ಪತ್ತೆಯಾದವು.  ಜಮ್ಮು ಮತ್ತು ಕಾಶ್ಮೀರದ ಉರಿ ವಲಯದ ಗಡಿ ನಿಯಂತ್ರಣ ರೇಖೆ ಬಳಿ ಕಾರ್ಯಾಚರಣೆಗೆ ನಿಯೋಜನೆಗೊಂಡಿದ್ದ ಈ ಯೋಧ ದೆಹಲಿಯ ವಿಮಾನ ಏರಬೇಕಿತ್ತು. ತಪಾಸಣೆಗೆ ಒಳಪಡಿಸಿದಾಗ ಆತನ ಬಳಿ ಎರಡು ಗ್ರೆನೇಡ್‍ಗಳು ಕಂಡುಬಂದವು.

ತಕ್ಷಣ ಆತನನ್ನು ವಶಕ್ಕೆ ತೆಗೆದುಕೊಂಡು ಭದ್ರತಾ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ವಿಮಾನದಲ್ಲಿ ಗ್ರನೇಡ್ ಕೊಂಡೊಯ್ಯಲು ಈ ಯೋಧ ಯತ್ನಿಸಿದ್ದಕ್ಕೆ ಕಾರಣವೇನು. ಇದರ ಹಿಂದೆ ಇರುವ ಉದ್ದೇಶವೇನು ಎಂಬಿತ್ಯಾದಿ ಬಗ್ಗೆ ಕೂಲಂಕಷ ವಿಚಾರಣೆ ನಡೆಸಲಾಗುತ್ತಿದೆ. ರಕ್ಷಣಾ ಸಚಿವಾಲಯದ ಉನ್ನತಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin