ಯಡಿಯೂರಪ್ಪನವರ ನಾಯಕತ್ವ ಈಶ್ವರಪ್ಪಗೆ ಇಷ್ಟ ಇಲ್ಲ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-vs-Siddaramaiah
ಬೆಂಗಳೂರು,ಏ.3-ಯಡಿಯೂರಪ್ಪನವರ ನಾಯಕತ್ವ ಈಶ್ವರಪ್ಪಂಗೆ ಇಷ್ಟ ಇಲ್ಲ. ಹಾಗಾಗಿ ಬಿಜೆಪಿ ಸೋಲಬೇಕಾಗಿದೆ. ಈ ನಿಟ್ಟಿನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ಪರ ಚಿಕ್ಕಾಟಿ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿ ರೋಡ್ ಶೋ ನಡೆಸಿದ ಅವರು, ಈಶ್ವರಪ್ಪನಿಗೂ, ಯಡಿಯೂರಪ್ಪನಿಗೂ ಆಗುವುದಿಲ್ಲ. ಯಡಿಯೂರಪ್ಪನ ನಾಯಕತ್ವ ಈಶ್ವರಪ್ಪನಿಗೆ ಬೇಕಿಲ್ಲ. ಹಾಗಾಗಿ ಈ ಚುನಾವಣೆ ಯಲ್ಲಿ ಬಿಜೆಪಿ ಸೋಲಬೇಕಿದೆ ಎಂದರು.
ಚಾಮರಾಜನಗರ ಜಿಲ್ಲೆಗೆ ಬಂದರೆ ಅಧಿಕಾರ ಹೋಗುತ್ತದೆ ಎಂದು ಬಿ.ಎಸ್.ಯಡಿಯೂರಪ್ಪ ಈ ಜಿಲ್ಲೆಗೆ ಬಂದಿರಲಿಲ್ಲ. ಆದರೆ ನಾನು ಜಿಲ್ಲೆಗೆ ಬಂದ ಮೇಲೆ ನನ್ನ ಶಕ್ತಿ ಹೆಚ್ಚಾಗಿದೆ. ನಾನು ಇನ್ನು ಅಧಿಕಾರದಲ್ಲಿದ್ದೇನೆ. ಮುಂದೆಯೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು. ಜಿಲ್ಲೆಗೆ ಬಂದರೆ ಅಧಿಕಾರ ಹೋಗುತ್ತದೆ ಎಂಬ ಹಿನ್ನೆಲೆಯಲ್ಲಿ ಇಲ್ಲಿಗೆ ಭೇಟಿ ಕೊಡದ ಬಿ.ಎಸ್.ಯಡಿಯೂರಪ್ಪಂಗೆ ಉಪಚುನಾವಣಾ ಪ್ರಚಾರಕ್ಕೆ ಬರುವ ನೈತಿಕತೆ ಇಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin