ನಂಜನಗೂಡು ಉಪಚುನಾವಣೆಯಲ್ಲಿ ‘ಕೈ’ ಹಿಡಿದು ಸಾಥ್ ನೀಡಲಿರುವ ತೆನೆ ಹೊತ್ತ ಮಹಿಳೆ

ಈ ಸುದ್ದಿಯನ್ನು ಶೇರ್ ಮಾಡಿ

JDS---Congress

ನಂಜನಗೂಡು,ಏ.4- ಮೈಸೂರು ಜಿಲ್ಲಾ ಗ್ರಾಮಾಂತರ ಜೆಡಿಎಸ್ ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ ನೇತೃತ್ವದಲ್ಲಿ ನಂಜನಗೂಡು ಒಕ್ಕಲಿಗ ಸಮುದಾಯದ ಪ್ರಮುಖರ ನಿಯೋಗವೊಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಮೈಸೂರು ನಿವಾಸದಲ್ಲಿ ಭೇಟಿ ಮಾಡಿ ಕಾಂಗ್ರೇಸ್ ಪಕ್ಷಕ್ಕೆ ತಮ್ಮ ಬೆಂಬಲ ಸೂಚಿಸಿದೆ ಎಂದು ತಿಳಿದು ಬಂದಿದೆ.   ನಿಯೋಗದ ನೇತೃತ್ವವಹಿಸಿದ್ದ ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ, ಪಿರಿಯಾಪಟ್ಟಣ ಶಾಸಕ ಕೆ.ವೆಂಕಟೇಶ್‍ರವರು ಈ ಭೈೀಟಿಯ ನೇತೃತ್ವ ವಹಿಸಿದ್ದರು. ಉಪ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಕಳಲೆ ಕೆಶವಮೂರ್ತಿಯವರನ್ನು ಜೆಡಿಎಸ್ ಪಕ್ಷ ಬೆಂಬಲಿಸಿದೆ ಎಂದು ವಾಗ್ದಾನ ನೀಡಿದೆ ಎನ್ನಲಾಗಿದೆ.

ವರಿಷ್ಠರ ನಿರ್ಧಾರದಂತೆ ಜೆಡಿಎಸ್ ಪಕ್ಷ ಉಪ ಚುನಾವಣೆಯಲ್ಲಿ ತಟಸ್ಥ ನೀತಿ ಅನುಸರಿಸುತ್ತಿದೆ ಎಂದು ನಿನ್ನೆವರೆಗೂ ಹೇಳುತ್ತಲೇ ಬಂದ ನರಸಿಂಹಸ್ವಾಮಿಯವರು ರಾತ್ರೋ ರಾತ್ರಿ ತಮ್ಮ ನಿಲುವನ್ನು ಬದಲಿಸಿ, ಕಾಂಗ್ರೇಸ್ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸುವ ನಿರ್ಧಾರವನ್ನು ಮುಖ್ಯಮಂತ್ರಿಗಳ ಎದುರು ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ದಿಡೀರ್ ಬೆಳವಣಿಗೆಯಾಗಿದೆ.   ಜಿಲ್ಲಾ ಉಸ್ತುವಾರಿ ಸಚಿವ ಹೆಚ್, ಸಿ.ಮಹದೇವಪ್ಪ ತಮ್ಮ ಜೆಡಿಎಸ್‍ನ ಹಳೆ ಸ್ನೇಹವನ್ನು ಬಳಸಿಕೊಂಡು ಎನ್.ನರಸಿಂಹಸ್ವಾಮಿ ಯವರನ್ನು ಮನವೊಲಿಸಿದ್ದು, ರಾತ್ರಿಯೇ ವ್ಯಾಪಕ ಸುದ್ದಿ ಹರಡಿತ್ತು.

ಅದಕ್ಕೆ ಪೂರಕವಾಗಿ ಇಂದು ಬೆಳ್ಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿರುವುದು ಪುಷ್ಠಿ ನೀಡಿದೆ.   ನಿಯೋಗದಲ್ಲಿ ನಗರಸಭಾ ಸದಸ್ಯ ಎನ್.ಎಂ.ಮಂಜುನಾಥ್, ರಾಜೇಶ್, ಮಾಜಿ ಅಧ್ಯಕ್ಷರಾದ ಶ್ರೀಧರ್, ದೋರೆಸ್ವಾಮಿ, ವಕ್ಕಲಗೇರಿ ಯಜಮಾನ್ ರಾಜಣ್ಣ, ಜಿ.ಕಿಟ್ಟಪ್ಪ, ಎನ್.ಇ.ಮಂಜುನಾಥ್, ದೇವರಸನಹಳ್ಳಿ ಮಂಜು, ಗ್ರಾ.ಪಂ,ಸದಸ್ಯ ರಂಗಸ್ವಾಮಿ, ವಿನೋದ್, ಶಿವಣ್ಣ, ಎನ್.ಶ್ರೀನಿವಾಸ್, ಜಿ,ಎಸ್.ಗೋವಿಂದರಾಜು, ಶಿವಕುಮಾರ್, ಪ್ರಮುಖರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin