ಬೇಲೂರು, ಚಿಕ್ಕಮಗಳೂರಿನಲ್ಲಿ ಆಲಿಕಲ್ಲು ಮಳೆ, ರೈತರಲ್ಲಿ ಮೊಗದಲ್ಲಿ ಮಂದಹಾಸ

ಈ ಸುದ್ದಿಯನ್ನು ಶೇರ್ ಮಾಡಿ

chikkamangaluru

ಚಿಕ್ಕಮಗಳೂರು,ಏ.4– ಜಿಲ್ಲೆಯ ಶೃಂಗೇರಿ , ಕೊಪ್ಪ , ಕಡೂರು ತಾಲ್ಲೂಕಿನ ಸುತ್ತಮುತ್ತ ಗ್ರಾಮಗಳಲ್ಲಿ ಗಾಳಿ, ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಬೀರಿದೆ.   ನಿನ್ನೆ ಮಧ್ಯಾಹ್ನ 3.30ಕ್ಕೆ ಆರಂಭವಾದ ಮಳೆಯು ಸಂಜೆ 6 ಗಂಟೆವರೆಗೂ ಧಾರಕಾರವಾಗಿ ಸುರಿದಿದ್ದು, ಆಲ್ಲಿಕಲ್ಲು ಸಹಿತ ಮಳೆಯಾಗಿದೆ.  ಜಿಲ್ಲೆಯಲ್ಲಿ ದಾಖಲೆಯ 38 ಡಿಗ್ರಿ ಸೆಲ್ಸಿಯನ್ ಉಷ್ಣಾಂಶವಿದ್ದು , ಬಿಸಿಲು ಬೇಗೆಯಿಂದ ಜನ, ಜಾನುವಾರುಗಳು ತತ್ತರಿಸಿದ್ದರು. ಕುಡಿಯುವ ನೀರಿಗೂ ಪರಿತಪಿಸುವಂತಾಗಿತ್ತು. ಬರದ ಪರಿಸ್ಥಿತಿಯಲ್ಲಿ ಜಿಲ್ಲೆಯಾದ್ಯಂತ ನಿನ್ನೆ ಮಳೆಯಾಗಿರುವುದರಿಂದ ರೈತರಲ್ಲಿ ನಿಟ್ಟುಸಿರು ಬಿಡುವಂತಾಗಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ನಿನ್ನೆ ಸುರಿದ ಮಳೆಯಿಂದಾಗಿ ಜಾನುವಾರಿಗಳಿಗೂ ಅಲ್ಪಸ್ವಲ್ಪ ಕುಡಿಯಲು ನೀರು ಸಂಗ್ರಹವಾಗಿದೆ. ಮುಂಗಾರು ರೇವತಿ ಮಳೆ ಈಗಷ್ಟೇ ಆರಂಭವಾಗಿದ್ದು, ರೈತರಿಗೆ ತುಸು ನೆಮ್ಮದಿ ಸಿಕ್ಕಂತಾಗಿದೆ.

+ ಮಂಜುಗಡ್ಡೆಯಂತೆ ಕಂಡ ಆಲಿಕಲ್ಲು :  ಸ್ಥಳೀಯರಲ್ಲಿ ಅಚ್ಚರಿ

rain in beluru

ಬೇಲೂರು, ಏ.4- ತಾಲೂಕಿನಲ್ಲಿ ಹಲವೆಡೆ ಕಳೆದ ರಾತ್ರಿ ಆಲಿಕಲ್ಲು ಮಳೆಯಾಗಿದ್ದು, ಭಾರಿ ಗಾತ್ರದ ಆಲಿ ಕಲ್ಲುಗಳನ್ನು ಕಂಡು ಸ್ಥಳೀಯರಲ್ಲಿ ಅಚ್ಚರಿ ಮೂಡಿಸುವುದರೊಂದಿಗೆ ಆತಂಕಕ್ಕೆ ಕಾರಣವಾಗಿತ್ತು.ಕಳೆದ ರಾತ್ರಿ ಭಾರಿ ಗಾಳಿ ಮತ್ತು ಗುಡುಗು ಮಿಂಚು ಸಹಿತ ಮಳೆಯಾಗಿದೆ. ತಾಲೂಕಿನ ಬಿಕ್ಕೋಡು ಹೋಬಳಿಯ ಇಂಟಿತೊಳಲು ಗ್ರಾಮದ ಸುತ್ತಮುತ್ತ ಬಾರಿ ಗಾತ್ರದ ಆಲಿಕಲ್ಲು ಮಳೆ ಬಿದ್ದಿದೆ.ರಾತ್ರಿ ಮಲಗಿದ್ದವರು ಎಂದಿನಂತೆ ಮಳೆ ಬಂದಿದೆ ಎಂದುಕೊಂಡು ಸುಮ್ಮನಿದ್ದರು. ಆದರೆ ಮಳೆಯ ಜೊತೆಯಲ್ಲಿ ಬಾರಿ ಗಾತ್ರದ ಆಲಿಕಲ್ಲುಗಳು ಬಿದ್ದಿದ್ದು, ಬೆಳಗ್ಗೆಯಾದರೂ ಕರಗದೆ ಮಂಜುಗಡ್ಡೆಯಂತಿತ್ತು.ಆಲಿ ಕಲ್ಲುಗಳನ್ನು ಕುತೂಹಲದಿಂದ ಕೆಲವರು ಕೊಂಡೋಯ್ದರೆ, ಮಕ್ಕಳು ಆಟಕ್ಕೆ ಬಳಸುತಿದ್ದದು ಕಂಡು ಬಂದಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin