ಸಿರಿಯಾದಲ್ಲಿ ಕೆಮಿಕಲ್ ಅಟ್ಯಾಕ್ : ಮಕ್ಕಳೂ ಸೇರಿದಂತೆ 58ಕ್ಕೂ ಹೆಚ್ಚು ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Chemical-Attack--01

ಬೈರುತ್,ಏ.4- ಯುದ್ದ ವಿಮಾನಗಳು ನಡೆಸಿದ ಶಂಕಿತ ರಾಸಾಯನಿಕ  ಅನಿಲ ದಾಳಿಗೆ (ಗ್ಯಾಸ್ ಆಟ್ಯಾಕ್) ಮಕ್ಕಳೂ ಸೇರಿದಂತೆ 58ಕ್ಕೂ ಹೆಚ್ಚು ಮಂದಿ ಬಲಿಯಾಗಿರುವ ದುರಂತ ವಾಯುವ್ಯ ಸಿರಿಯಾದಲ್ಲಿ ಇಂದು ನಡೆದಿದೆ.   ಸಿರಿಯಾದ ಬಂಡುಕೋರರ ಪ್ರಾಬಲ್ಯವಿರುವ ಇದ್ಲಿಬ್ ಪ್ರಾಂತ್ಯದ ಖಾನ್ ಶೇಖ್‍ಹುನ್ ಪ್ರದೇಶದಲ್ಲಿ ಈ ದಾಳಿ ನಡೆದಿದ್ದು, ವಿಷಾನಿಲದ ಪರಿಣಾಮ ಸಾವು-ನೋವು ಸಂಭವಿಸಿದೆ ಎಂದು ಸಿರಿಯಾ ಮಾನವ ಹಕ್ಕುಗಳ ರಕ್ಷಣಾ ಸಂಸ್ಥೆಯೊಂದು ತಿಳಿಸಿದೆ. ಈ ಅನಿಲ ದಾಳಿಯಲ್ಲಿ ಅನೇಕರಿಗೆ ಉಸಿರಾಟ ತೊಂದರೆ ಮತ್ತು ಇತರ ಸಮಸ್ಯೆಗಳು ಕಂಡು ಬಂದಿದ್ದು , ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin