ಏರ್‍ಸೆಲ್’ನಿಂದ ಅನ್ಲಿಮಿಟೆಡ್ ಫ್ರೀ ಇಂಟರ್‍ನೆಟ್

ಈ ಸುದ್ದಿಯನ್ನು ಶೇರ್ ಮಾಡಿ

Aircel--Free-data

ಬೆಂಗಳೂರು,ಏ.5-ಕೈಗೆಟುಕುವ ಮೊಬೈಲ್ ಇಂಟರ್‍ನೆಟ್ ನೀಡುವ ಮತ್ತು ಹೆಚ್ಚಾಗುತ್ತಿರುವ ಡೇಟಾ ಬೇಡಿಕೆಯ ಹಿನ್ನೆಲೆಯಲ್ಲಿ ಭಾರತದ ಆವಿಷ್ಕಾರೀ ಟೆಲಿಕಾಂ ಬ್ರಾಂಡ್‍ಗಳಲ್ಲಿ ಒಂದಾದ ಏರ್‍ಸೆಲ್-ಏರ್‍ಸೆಲ್ ಗುಡ್‍ನೈಟ್ಸ್ ಪ್ರಾರಂಭಿಸಿದ್ದು ಇದು ತನ್ನ ಎಲ್ಲ ಪ್ರಿಪೇಯ್ಡ್ ಬಳಕೆದಾರರಿಗೆ 3am ನಿಂದ  5am ವರೆಗೆ ಉಚಿತ ಮೊಬೈಲ್ ಇಂಟರ್‍ನೆಟ್ ನೀಡುತ್ತದೆ.   ಈ ಸೇವೆ ಎಲ್ಲ ಏರ್‍ಸೆಲ್ ಗ್ರಾಹಕರಿಗೂ ಯಾವುದೇ ಶುಲ್ಕವಿಲ್ಲದೆ ವಿಡಿಯೋಗಳನ್ನು ಬ್ರೌಸ್ ಮಾಡಲು, ವೀಕ್ಷಿಸಲು ಅಥವಾ ಡೌನ್‍ಲೋಡ್ ಮಾಡಲು ಯಾವುದೇ ಶುಲ್ಕವಿಲ್ಲದೆ ಆಫ್-ಪೀಕ್ ಗಂಟೆಗಳಲ್ಲಿ ಅವಕಾಶ ಕಲ್ಪಿಸುತ್ತದೆ.

ಏರ್‍ಸೆಲ್ ಗುಡ್‍ನೈಟ್ ತನ್ನ ಎಲ್ಲ ಪ್ರಿಪೇಯ್ಡ್ ಡೇಟಾ ಆಕ್ಟಿವ್ ಬಳಕೆದಾರರಿಗೆ ಲಭ್ಯ. ಏರ್‍ಸೆಲ್ ಗ್ರಾಹಕರು ಉಚಿತ ಇಂಟರ್‍ನೆಟ್ ಅನ್ನು 3ಜಿ/2ಜಿ ಡೇಟಾವನ್ನು 3ಜಿ ವೃತ್ತಗಳು ಮತ್ತು 2ಜಿ ಡೇಟಾವನ್ನು 2ಜಿ ವೃತ್ತಗಳಲ್ಲಿ ಪಡೆಯಬಹುದು. ಈ ಸೇವೆ 3 ತಿಂಗಳಿಗೆ ಲಭ್ಯವಿದೆ ಮತ್ತು ದಿನಕ್ಕೆ 500ಎಂಬಿ ಎಫ್‍ಯುಪಿ ಹೊಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin