ನವಜಾತ ಶಿಶುವನ್ನು ಪ್ಲಾಸ್ಟಿಕ್ ಬ್ಯಾಗ್‍’ನಲ್ಲಿ ಹಾಕಿ ಮೋರಿ ಕೆಳೆಗೆ ಎಸೆದ ‘ಮಹಾತಾಯಿ’ ..!

ಈ ಸುದ್ದಿಯನ್ನು ಶೇರ್ ಮಾಡಿ

gowribidanuru

ಗೌರಿಬಿದನೂರು, ಏ.5- ಎಷ್ಟೋ ಮಹಿಳೆಯರು ಮಕ್ಕಳಾಗಲೆಂದು ದೇವರಲ್ಲಿ ಹರಕೆ ಹೊತ್ತರೆ ಇಲ್ಲೊಬ್ಬಳು ನಿರ್ದಯಿ ತಾಯಿ ತಾನೇ ಹೆತ್ತ ಮಗುವನ್ನು ಪ್ಲಾಸ್ಟಿಕ್ ಬ್ಯಾಗ್‍ವೊಂದಲ್ಲಿ ಮೋರಿಯ ಕೆಳಗೆ ಬಿಸಾಡಿರುವ ಹೇಯ ಘಟನೆ ಪಟ್ಟಣದ ಹಿರೇಬಿದನೂರು ಗ್ರಾಮದಲ್ಲಿ ನಡೆದಿದೆ.ಆಗ ತಾನೆ ಹುಟ್ಟಿರುವ ನವಜಾತ ಹೆಣ್ಣು ಶಿಶು ಆರೋಗ್ಯವಾಗಿದೆ. ಬೈಪಾಸ್ ರಸ್ತೆಯ ಚರಂಡಿಯ ಬಳಿ ಬ್ಯಾಗ್‍ವೊಂದರಲ್ಲಿಟ್ಟಿದ್ದು, ಮಗು ಅಳುತ್ತಿದ್ದ ಶಬ್ದವನ್ನು ಕೇಳಿದ ಕಾರು ಚಾಲಕ ವೆಂಕಟೇಶ್ ಮಗುವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಒಪ್ಪಿಸಿದ್ದಾನೆ.ಸುದ್ದಿ ತಿಳಿಯುತ್ತಿದ್ದಂತೆಯೇ ಪಟ್ಟಣದ ಮಕ್ಕಳ ಸಹಾಯವಾಣಿ ನಿರ್ದೇಶಕ ಬಾಲಗಂಗಾಧರ್, ಜಿಲ್ಲಾ ಸಂಯೋಜಕಿ ಸುಕನ್ಯ ಮತ್ತು ಅಪ್ಸರ ಆಸ್ಪತ್ರೆಗೆ ಭೇಟಿ ನೀಡಿ ಮಗುವಿಗೆ ಚಿಕಿತ್ಸೆ ನೀಡಿದ ನಂತರ ಶಿಶಿ ಮಕ್ಕಳ ಮಂದಿರಕ್ಕೆ ಹಸ್ತಾಂತರಿಸುವುದಾಗಿ ಬಾಲಗಂಗಾಧರ್ ತಿಳಿಸಿದ್ದಾರೆ.

ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಜಿ.ವೇಣುಗೋಪಾಲರೆಡ್ಡಿ, ತಾ.ಪಂ. ಮಾಜಿ ಅಧ್ಯಕ್ಷ ಗಂಗಾಧರ್, ದಲಿತ ಮುಖಂಡರಾದ ಜಿ.ಇಂದ್ರಕುಮಾರ್, ರಾಮಾಂಜಿ, ಶಿವಕುಮಾರ್ ಅವರುಗಳು ಪುಟ್ಟ ಕಂದಮ್ಮನನ್ನು ನೋಡಿ ಇಂತಹ ಕೃತ್ಯವನ್ನು ಎಸಗಿರುವವರ ವಿರುದ್ದ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಗುವನ್ನು ನೋಡಲು ನೂಕು ನುಗ್ಗಲು :

ಅದೆಷ್ಟೋ ಮಂದಿ ಮಕ್ಕಳಿಲ್ಲದೆ ಸಿಕ್ಕ ಸಿಕ್ಕ ದೇವರುಗಳಿಗೆ ಹರಕೆ ಪೂಜೆ ಹೋಮ-ಹವನಗಳನ್ನು ಮಾಡುತ್ತಿರುವವರಿದ್ದಾರೆ. ಆದರೆ ಆಗ ತಾನೆ ಹುಟ್ಟಿದ ಮಗುವನ್ನು ಬಿಸಾಡಿರುವ ಆ ನಿರ್ದಯಿ ತಾಯಿ ಎಷ್ಟು ಕಠಿಣ ಹೃದಯಿ ಎಂದು ಹಿಡಿ ಶಾಪ ಹಾಕುತ್ತಿದ್ದುದು ಕಂಡು ಬಂದಿತು.ಪುರ ಠಾಣೆಯ ಎಸ್‍ಐ ಸುಂದರ್ ಆಸ್ಪತ್ರೆಗೆ ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin