ಪಾಕ್ ಕ್ರಿಕೆಟಿಗರ ಪರ ನಟ ಋಷಿ ಕಪೂರ್ ಬ್ಯಾಟಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Rish-Kapoor-0

ಮುಂಬೈ,ಏ.5- ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ ಟಿ-20 ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸಲು ಪಾಕಿಸ್ತಾನದ ಆಟಗಾರರಿಗೂ ಅವಕಾಶ ದೊರೆಯಬೇಕು ಮತ್ತು ಅವರ ಪ್ರತಿಭೆ ಪ್ರದರ್ಶನಕ್ಕೂ ಅವಕಾಶ ನೀಡಬೇಕು ಎಂದು ಬಾಲಿವುಡ್‍ನ ಖ್ಯಾತ ನಟ ಋಷಿಕಪೂರ್ ಹೇಳಿದ್ದಾರೆ.
ಐಪಿಎಲ್‍ನ 10ನೇ ಆವೃತ್ತಿಯ ಪಂದ್ಯಗಳು ಆರಂಭವಾಗಲು ಕ್ಷಣಗಣನೆ ಶುರುವಾಗಿರುವಾಗಲೇ 64ರ ಹರೆಯದ ನಟ ಋಷಿ ಕಪೂರ್ ಪಾಕ್ ಕ್ರಿಕೆಟಿಗರ ಪರ ಬ್ಯಾಟ್ ಬೀಸಿದ್ದಾರೆ.

ಇದೊಂದು ವಿಶ್ವ ಸಾಮುದಾಯಿಕ ಕ್ರೀಡೆಯಾಗಿದ್ದು, ಇದರಲ್ಲಿ ಎಲ್ಲರೂ ಭಾಗವಹಿಸುವಂತಾಗಬೇಕು. ವಿಶ್ವದ ಎಲ್ಲ ದೇಶಗಳ ಆಟಗಾರರು ಇದರಲ್ಲಿ ಭಾಗವಹಿಸಬೇಕು. ಆಫ್ಘಾನಿಸ್ತಾನದ ಕ್ರಿಕೆಟಿಗರು ಕೂಡ ಈ ಐಪಿಎಲ್ ಮೂಲಕ ಶುಭಾರಂಭ ಮಾಡುತ್ತಾರೆ. ಈ ಸಂದರ್ಭ ಪಾಕಿಸ್ತಾನದ ಆಟಗಾರರಿಗೂ ಅವಕಾಶ ನೀಡುವ ಬಗ್ಗೆ ಮರು ಪರಿಶೀಲನೆ ನಡೆಸುವಂತೆ ನಾನು ವಿನಂತಿಸುತ್ತೇನೆ ಎಂದು ಅವರು ಟ್ವೀಟರ್‍ನಲ್ಲಿ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin