ಬಿಗ್ ಬಾಸ್ ವಿನ್ನರ್ ಪ್ರಥಮ್ ಆತ್ಮಹತ್ಯೆ ‘ಡ್ರಾಮಾ’ದ ಕಂಪ್ಲೀಟ್ ಡೀಟೇಲ್ಸ್

ಈ ಸುದ್ದಿಯನ್ನು ಶೇರ್ ಮಾಡಿ

pratham

ಬೆಂಗಳೂರು, ಏ.5- ಕನ್ನಡದ ಬಿಗ್‍ಬಾಸ್ ನಾಲ್ಕನೇ ಆವೃತ್ತಿಯ ವಿಜೇತ ಪ್ರಥಮ್ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.ಇಂದು ಮುಂಜಾನೆ 4 ಗಂಟೆ ವೇಳೆ ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್‍ನಲ್ಲಿ ಪ್ರಥಮ್ ತನ್ನ ವೈಯಕ್ತಿಕ ಹಾಗೂ ಸ್ನೇಹಿತರ ಕಿರುಕುಳದಿಂದ ನಿದ್ರೆ ಮಾತ್ರೆ ಸೇವಿಸಿದ್ದು, ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಹೇಳಿದ್ದಾರೆ.ಇದನ್ನು ಕಂಡ ಕೆಲವರು ತಕ್ಷಣ ಅವರ ಸಂಬಂಧಿಕರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿ ಪ್ರಥಮ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

20 ನಿಮಿಷ ನೇರ ಮಾತು:
ಬಿಗ್‍ಬಾಸ್‍ನಲ್ಲಿ ಗೆದ್ದ ಹಣಕ್ಕೆ ಸಂಬಂಧಿಸಿದಂತೆ ನನ್ನ ಸ್ನೇಹಿತ ಲೋಕೇಶ್ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಕೆಲವರು ನನಗೆ ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ. ನನ್ನ ಕೆಲಸವನ್ನು ಕೆಟ್ಟದ್ದಾಗಿ ತೋರಿಸುತ್ತಿದ್ದಾರೆ. ಇನ್ನು ಮುಂದೆ ಯಾರಿಗೂ ಬೇಸರ ಮಾಡುವುದಿಲ್ಲ. ಈಗಾಗಲೇ ನಾನು ನಿದ್ರೆ ಮಾತ್ರೆಗಳನ್ನು ಸೇವಿಸಿದ್ದೇನೆ. ಇದು ನನ್ನ ಕೊನೆಯ ಮಾತುಗಳು ಎಂದು ಹೇಳಿದ್ದಾರೆ.ಕೆಲ ಮಾಧ್ಯಮಗಳು ಕೂಡ ನನ್ನನ್ನು ಟಾರ್ಗೆಟ್ ಮಾಡುತ್ತಿವೆ ಎಂದು ಹೇಳುವಾಗ ಬಿಗ್‍ಬಾಸ್ ಶೋನ ಪೈನಲ್‍ನಲ್ಲಿ ಧರಿಸಿದ್ದ ಬಟ್ಟೆಯನ್ನು ತೋರಿಸಿ ಇಂತಹ ಸ್ಥಿತಿ ಬೇರೆ ಯಾರಿಗೂ ಬರಬಾರದು.

ಮತ್ತೆ ಮತ್ತೆ ಸ್ನೇಹಿತ ಲೋಕೇಶ್ ಅವರ ಹೆಸರನ್ನು ಪ್ರಸ್ತಾಪಿಸಿ ನನ್ನನ್ನು ಕೀಳಾಗಿ ಕಂಡು ನಿಂದಿಸುತ್ತಾನೆ. ದೇವರು ಶಿಕ್ಷಿಸಲಿ ಎಂದು ಹೇಳಿ ತಮ್ಮ ನೋವನ್ನು ಬಿಚ್ಚಿಟ್ಟಿದ್ದಾರೆ.ಈ ಹಿಂದೆ ತನ್ನ ಜತೆ ಕೆಟ್ಟದ್ದಾಗಿ ನಡೆದುಕೊಂಡು ಮಾತನಾಡಿದ್ದವರ ಧ್ವನಿಗಳನ್ನು ಕೂಡ್ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡಿದ್ದಾರೆ. ನಾಗರಬಾವಿಯ ಅಪೂರ್ವಲೇಔಟ್‍ನ ಸ್ವಾತಿ ಹೋಟೆಲ್ ಬಳಿ ವಾಸವಾಗಿರುವ ಪ್ರಥಮ್ ಅವರ ನಿವಾಸಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಪ್ರಥಮ್ ಎರಡು ನಿದ್ದೆ ಮಾತ್ರೆಯನ್ನು ಸೇವಿಸಿದ್ದು. ಜೀವಕ್ಕೇನು ಅಪಾಯವಿಲ್ಲ ಎಂದು ತಿಳಿದು ಬಂದಿದೆ.ಪೊಲೀಸ್ ಮೂಲಗಳ ಪ್ರಕಾರ ಮಾಧ್ಯಮಗಳಲ್ಲಿ ಸುದ್ದಿಗಳು ಬಿತ್ತರವಾದ ನಂತರ ಸ್ಥಳಕ್ಕೆ ಭೇಟಿ ನೀಡಿದ್ದೆವು. ಪ್ರಥಮ್ ಅವರು ಚಿತ್ರರಂಗದ ನಿರ್ದೇಶಕರೊಬ್ಬರ ಜತೆ ತಿಂಡಿ ತಿನ್ನುತ್ತಿದ್ದರು. ಎಲ್ಲವನ್ನೂ ವಿಚಾರಿಸಿದ್ದೇವೆ. ಅವರು ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಿಗಿದ್ದಾರೆ ಎಂದು ಈ ಸಂಜೆಗೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಥಮ್ ತಂದೆ ಹೇಳಿದ್ದೇನು..?

ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿರುವ ಮಗ ಪ್ರಥಮ್ ತಂದೆ ನಾಗರಬಾವಿ ಬಳಿಯ ಫೋರ್ಟಿಸ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಥಮ್ ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.   ಮಗನ ಸ್ಥಿತಿ ಕಂಡು ತುಂಬಾ ನೋವಾಗುತ್ತಿದೆ. ವೈದ್ಯರು 3-4 ಗಂಟೆ ಆಸ್ಪತ್ರೆಯಲ್ಲೇ ಇರಬೇಕೆಂದು ಹೇಳಿದ್ದಾರೆ. ಬಿಗ್ ಬಾಮಸ್ ಗೆದ್ದ ಹಣ ಡ್ರಾ ಮಾಡಲು ಪಾನ್ ಕಾರ್ಡ್ ತರಲು ಊರಿಗೆ ಹೋಗಿದ್ದೆ. ನಿನ್ನೆ ಸಂಜೆ ಕೂಡ ಅವನ ಜೊತೆ ಮಾತನಾಡಿದ್ದೆ ಎಂದು ಮಲ್ಲಣ್ಣ ನೋವು ತೋಡಿಕೊಂಡಿದ್ದಾರೆ.   ಮೂರ್ನಾಲ್ಕು ದಿನಗಳಲ್ಲಿ ನವದೆಹಲಿಗೆ ತೆರಳಿ ಮೋದಿಯನ್ನ ಭೇಟಿಯಾಗಿ ಯೋಧರಿಗೆ ಹಣ ನೀಡೋಣವೆಂದು ಪ್ರಥಮ್ ಹೇಳಿದ್ದ. ಅಷ್ಟರೊಳಗೆ ಹೀಗೆ ಮಾಡಿಕೊಂಡಿದ್ದಾನೆಂದು ಮಲ್ಲಣ್ಣ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  


ಲೋಕೇಶ್ ಪೊಲೀಸರಿಗೆ ನೀಡಿದ ದೂರಿನ ಪ್ರತಿಗಳು

Pratham-1

Pratham-2

Facebook Comments

Sri Raghav

Admin