ಸಾವಿನ ಜೊತೆ ಹೋರಾಟದಲ್ಲಿ ಗೆದ್ದು ಬಂದ ಯೋಧ ಚೇತನ್ ಕುಮಾರ್ ಚೀತಾ

ಈ ಸುದ್ದಿಯನ್ನು ಶೇರ್ ಮಾಡಿ

Chetan-Kumar-Cheeta

ನವದೆಹಲಿ. ಏ.05 : ಜಮ್ಮು-ಕಾಶ್ಮೀರದಲ್ಲಿ ಉಗ್ರರೊಂದಿಗಿನ ಕಾದಾಟದಲ್ಲಿ 9 ಗುಂಡೇಟು ತಿಂದು ಆಸ್ಪತ್ರೆ ಸೇರಿದ್ದ ಸಿಆರ್ ಪಿಎಫ್ ಕಮಾಂಡೆಂಟ್ ಚೇತನ್ ಚೀತಾ ಸಾವನ್ನೂ ಗೆದ್ದಿದ್ದಾರೆ. ಐಸಿಯುನಲ್ಲಿ ಕೋಮಾದಲ್ಲಿದ್ದ ಚೇತನ್ ಕುಮಾರ್ ಚೀತಾ, ಕೋಮಾದಿಂದ ಹೊರಬಂದಿದ್ದಾರೆ.  ಐಸಿಯುನಲ್ಲಿ ಕೋಮಾದಲ್ಲಿದ್ದ ಚೇತನ್ ಕುಮಾರ್ ಚೀತಾ, ಕೋಮಾದಿಂದ ಹೊರಬಂದಿದ್ದಾರೆ. ಫೆಬ್ರವರಿ 14ರಂದು ಜಮ್ಮು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಹಜಿನ್ ಏರಿಯಾದಲ್ಲಿ ಉಗ್ರರ ಅಡಗುದಾಣದ ಮೇಲೆ ದಾಳಿ ನಡೆದಿತ್ತು. ಈ ವೇಳೆ ನಡೆದ ಎನ್’ಕೌಂಟರ್’ನಲ್ಲಿ ಚೇತನ್ ಕುಮಾರ್ ತೀವ್ರ ಗಾಯಗೊಂಡಿದ್ದರು. ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರಗೆ ದಾಖಲಿಸಲಾಗಿತ್ತು.

. 9 ಗುಂಡುಗಳು ಅವರ ದೇಹ ಹೊಕ್ಕಿದ್ದವು. ಕಣ್ಣು, ತಲೆ ಸೇರಿದಂತೆ ದೇಹದ ಅನೇಕ ಭಾಗಗಳಿಗೆ ಗುಂಡು ತಗುಲಿದ್ದರಿಂದ ಚೇತನ್ ಬದುಕಿ ಬರೋ ಸಾಧ್ಯತೆ ಕ್ಷೀಣಿಸಿತ್ತು. ವಿಶೇಷ ವಿಮಾನದಲ್ಲಿ ಚೇತನ್ ರನ್ನು ದೆಹಲಿ ಏಮ್ಸ್ ಆಸ್ಪತ್ರೆಗೆ ಕರೆ ತರಲಾಗಿತ್ತು. ಕೋಮಾದಲ್ಲಿದ್ದ ಚೇತನ್ ಗೆ ವೈದ್ಯರು ಚಿಕಿತ್ಸೆ ನೀಡಿದ್ದರು.
ಪವಾಡ ರೀತಿಯಲ್ಲಿ ಚೇತನ್ ಬದುಕಿ ಬಂದಿದ್ದು, ಕೆಲಸಕ್ಕೆ ಹಾಜರಾಗುವ ಉತ್ಸಾಹ ವ್ಯಕ್ತಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin