ಆಹಾರ ಪೂರೈಕೆ ಗುತ್ತಿಗೆದಾರರ ವಿರುದ್ಧ ರೈಲ್ವೆ ಇಲಾಖೆ ಕಠಿಣ ಕ್ರಮ : 1.8 ಕೋಟಿ ರೂ. ದಂಡ ವಸೂಲಿ

ಈ ಸುದ್ದಿಯನ್ನು ಶೇರ್ ಮಾಡಿ

Railway-Food

ನವದೆಹಲಿ, ಏ.6- ನಿಯಮಗಳನ್ನು ಉಲ್ಲಂಘಿಸುವ ಆಹಾರ ಪೂರೈಕೆ ಗುತ್ತಿಗೆದಾರರ ವಿರುದ್ಧ ರೈಲ್ವೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರತಿಷ್ಠಿತ ಸಂಸ್ಥೆಯೊಂದರ ಆಹಾರ ಗುತ್ತಿಯೊಂದನ್ನು ರದ್ದುಗೊಳಿಸಿರುವ ರೈಲ್ವೆ 16 ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ (ಕಪ್ಪು ಪಟ್ಟಿಗೆ) ಸೇರಿಸಿದೆ.  ಅಲ್ಲದೇ ಕಳೆದ ಒಂದು ವರ್ಷದಲ್ಲಿ ಆಹಾರ ಪೂರೈಕೆ ಬಗ್ಗೆ ಅಸಂಖ್ಯಾತ ದೂರುಗಳಿಗೆ ಸಂಬಂಧಿಸಿದ 2,108 ಪ್ರಕರಣಗಳಲ್ಲಿ 1.8 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. ಪ್ರಯಾಣಿಕರಿಗೆ ಉತ್ತಮ ಮತ್ತು ಆರೋಗ್ಯಕರ ಆಹಾರ ಪೂರೈಸುವ ತನ್ನ ಉಪಕ್ರಮದ ಭಾಗವಾಗಿ ರೈಲ್ವೆಯು ಕೇಟರಿಂಗ್ ಕುರಿತ ದೂರುಗಳನ್ನು ಇತ್ಯರ್ಥಪಡಿಸಲು ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಇದಕ್ಕಾಗಿ ವಿವಿಧ ಹಂತಗಳಲ್ಲಿ ತಪಾಸಣೆಗಳ ಮೂಲಕ ಆಹಾರದ ಗುಣಮಟ್ಟದ ಮೇಲೆ ನಿಗಾ ಇಡಲು ಸಾಂಸ್ಥಿಕ ವ್ಯವಸ್ಥೆಯೊಂದನ್ನು ಜಾರಿಗೊಳಿಸಿದೆ.

ಕೇಟರಿಂಗ್ ಕುರಿತ ದೂರುಗಳನ್ನು ಸ್ವೀಕರಿಸಲೆಂದೇ ಉಚಿತ ದೂರವಾಣಿ ಸಂಖ್ಯೆ 138ರ ಜೊತೆಗೆ 1800-111-321 ಸಂಖ್ಯೆ ಇನ್ನೊಂದು ಶುಲ್ಕ ರಹಿತ ವ್ಯವಸ್ಥೆಯನ್ನೂ ಆರಂಭಿಸಿದೆ.  ಈ ವ್ಯವಸ್ಥೆ ಮೂಲಕ ಪ್ರತಿದಿನ ಸುಮಾರು 300 ಪ್ರಯಾಣಿಕರ ದೂರುಗಳನ್ನು ಸ್ವೀಕರಿಸಿ ತಕ್ಷಣ ಸ್ಪಂದಿಸಿ ಕ್ರಮ ಜರುಗಿಸಲಾಗುತ್ತಿದೆ ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin