‘ಏಟಿಗೆ ಏಟಿನಿಂದಲೇ ಉತ್ತರಿಸುತ್ತೇವೆ’ ಚೀನಾದ ಉದ್ದಟತನ ಹೇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

India-Achina-Dalai-lMa

ಬೀಜಿಂಗ್, ಏ.6- ಟಿಬೆಟ್ ಧರ್ಮಗುರು ದಲೈಲಾಮಾ ಅರುಣಾಚಲಕ್ಕೆ ಭೇಟಿ ವಿಷಯದಲ್ಲಿ ಭಾರತ ಮತ್ತು ಚೀನಾ ನಡುವಣ ಭಿನ್ನಾಭಿಪ್ರಾಯ ಮತ್ತಷ್ಟು ಉಲ್ಬಣಗೊಂಡಿದೆ. ಈಶಾನ್ಯ ರಾಜ್ಯಕ್ಕೆ ಅವರು ಭೇಟಿ ನೀಡಲು ಅವಕಾಶ ನೀಡುವ ಮೂಲಕ ಭಾರತವು ಕೆಟ್ಟ ವರ್ತನೆ ತೋರಿದಲ್ಲಿ ಏಟಿಗೆ ಏಟಿನಿಂದಲೇ ಪ್ರತ್ಯುತ್ತರ ನೀಡಲು ಹಿಂದುಮುಂದು ನೋಡಬಾರದು ಎಂದು ಚೀನಾ ಉದ್ದಟತನದ ಹೇಳಿಕೆ ನೀಡಿದೆ.   ಚೀನಾ ಡೈಲಿ ಮತ್ತು ಗ್ಲೋಬಲ್ ಟ್ರೈಮ್ಸ್ ಎಂಬ ಎರಡು ಚೀನಿ ಆಂಗ್ಲ ಪತ್ರಿಕೆಗಳು ಭಾರತದ ವಿರುದ್ಧ ಕಿಡಿ ಕಾರಿವೆ. ಅರುಣಾಚಲ ಪ್ರದೇಶವು ದಕ್ಷಿಣ ಟಿಬೆಟ್‍ನ ಭಾಗ ಎಂಬ ಚೀನಾದ ಹೇಳಿಕೆಯನ್ನು ಕೇಂದ್ರ ಗೃಹ ಸಚಿವ ಕಿರಣ್ ರಿಜುಜು ಖಂಡಿಸಿ, ಇದು ಭಾರತದ ಅವಿಭಾಜ್ಯ ಅಂಗ ಎಂದು ಪುನರುಚ್ಚರಿಸಿದ ಬೆನ್ನಲ್ಲೇ ಚೀನಾದ ಮಾಧ್ಯಮಗಳು ಟೀಕಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin