ಜಾತಿಯತೆ ಪಿಡುಗು ಜೀವಂತ : ವಿಷಾದ

ಈ ಸುದ್ದಿಯನ್ನು ಶೇರ್ ಮಾಡಿ

beluru3
ಬೇಲೂರು, ಏ.6- ವರ್ಣಭೇದ ನೀತಿ, ಜಾತಿಯತೆ ಎಂಬ ಪಿಡುಗು ಇಂದಿಗೂ ಜೀವಂತವಾಗಿರುವುದು ನಮ್ಮ ದೇಶದ ದುರಂತವಾಗಿದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ತಮ್ಮಣ್ಣಗೌಡ ವಿಷಾದಿಸಿದರು.ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಮ್‍ರವರ 110ನೇ ಜಯಂತಿ ಕಾರ್ಯಕ್ರಮದ ಅಂಗವಾಗಿ ಪುರಸಭೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತ ದೇಶವು ವೈವಿದ್ಯತೆಯಲ್ಲಿ ಏಕತೆ ಸಾಧಿಸಿದರು ಸಹ ಇಲ್ಲಿನ ಜಾತಿಯತೆಯಿಂದ ದೇಶದ ಅಭಿವೃದ್ದಿ ಕುಂಠಿತವಾಗಿದೆ. ಡಾ.ಬಾಬು ಜಗಜೀವನ್ ರಾಮ್‍ರವರು ನೆಹರು ಅವರ ಮಂತ್ರಿ ಮಂಡಳದಲ್ಲಿ ಅತ್ಯಂತ ಕಿರಿಯ ವಯಸ್ಸಿನ ಸಚಿವರಾಗಿ ಸೇವೆ ಸಲ್ಲಿಸಿದವರು. ತಾವು ತಾವು ಚಿಕ್ಕ ವಯಸ್ಸಿನಲ್ಲಿ ಅನುಭವಿಸಿದ ಶೋಷಣೆಯನ್ನು ಮೆಟ್ಟಿ ನಿಂತು ತಮ್ಮ ಜನಾಂಗಕ್ಕಾಗಿ ಹೊರಾಡಿದವರು ಇಂತಹ ಮಹಾನ್ ನಾಯಕರ ಆದರ್ಶಗಳನ್ನು ಇಂದಿನ ಯುವಕರು ಅಳವಡಿಸಿಕೊಳ್ಳಬೇಕು ಎಂದರು.

ಜಿಪಂ ಸದಸ್ಯೆ ಲತಾಮಂಜೇಶ್ವರಿ ಮಾತನಾಡಿ, ಭಾರತ ದೇಶದಲ್ಲಿನ ಜಾತಿಯತೆ, ಅಂಧಕಾರ ಹಾಗೂ ಮೌಢ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಹಲವಾರು ಮಹಾನ್ ಪುರುಷರು ಬಂದರು ಕೂಡ ದೇಶದಲ್ಲಿ ಜಾತಿಯತೆ ಹಾಗೂ ಮೌಢ್ಯಾವ್ಯಸ್ಥೆ ಜೀವಂತವಾಗಿದೆ. ಸಮಜದಲ್ಲಿ ಮನುಷ್ಯರನ್ನು ಮಾನುಷ್ಯರಂತೆ ಕಾಣುವ ವ್ಯವಸ್ಥೆ ಇನ್ನೂ ಬಂದಿಲ್ಲದಿರುವುದು ವಿಷಾದದ ಸಂಗತಿ ಎಂದು ಹೇಳಿದರು.ಕಾರ್ಯಕ್ರಮಕ್ಕೂ ಮುನ್ನ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಮ್‍ರವರ 110ನೇ ಜಯಂತಿ ಕಾರ್ಯಕ್ರಮದ ಮೆರವಣಿಗೆಗೆ ಶಾಸಕ ವೈ.ಎನ್.ರುದ್ರೇಶ್‍ಗೌಡ ಚಾಲನೆ ನೀಡಿದರು.
ಪುರಸಭಾಧ್ಯಕ್ಷೆ ಮುದ್ದಮ್ಮ, ಮಾಜಿ ಶಾಸಕ ವಿಶ್ವನಾಥ್,ತಾ.ಪಂ.ಉಪಾಧ್ಯಕ್ಷೆ ತೀರ್ಥಮ್ಮ, ಪುರಸಭಾ ಉಪಾಧ್ಯಕ್ಷ ಅರಣುಕುಮಾರ್, ದೊರೆಯಪ್ಪ, ತಾ.ಪಂ.ಸದಸ್ಯರಾದ ಮಂಜುನಾಥ್, ಕಿಟ್ಟಿ, ರವಿಕುಮಾರ್, ಸಮಾಜದ ಮುಖಂಡರಾದ ಶೇಖರಯ್ಯ, ದಾಸಪ್ಪ, ಪರ್ವತಯ್ಯ, ಕೃಷ್ಣ, ಸಮಾಜ ಕಲ್ಯಾಣಾಧಿಕಾರಿ ಡಾ.ಶ್ರೀಧರ್ ಇನ್ನಿತರರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin