‘ದೇವ್ರಂಥ ಮನುಷ್ಯ’ ಪ್ರಥಮ್

ಈ ಸುದ್ದಿಯನ್ನು ಶೇರ್ ಮಾಡಿ

devaranta-manushya

ಪ್ರಥಮ್, ಬಿಗ್‍ಬಾಸ್ ಮನೆಯಿಂದ ವಿನ್ನರ್ ಆಗಿ ಹೊರಬಂದ ಕೂಡಲೇ ದೊಡ್ಡ ಸ್ಟಾರ್ ಆಗಿಬಿಟ್ಟಿದ್ದಾರೆ. ಅವರಿಗೆ ಸಾಲುಸಾಲಾಗಿ ಸಿನಿಮಾಗಳ ಆಫರ್ ಬರುತ್ತಿದೆ. ಮೊನ್ನೆತಾನೆ ಸಿದ್ದಗಂಗಾ ಶ್ರೀಗಳ ಅಮೃತ ಹಸ್ತದಿಂದ ಹೊಸ ಚಿತ್ರವೊಂದರ ಉದ್ಘಾಟನೆಯಾಗಿದೆ. ಆ ಚಿತ್ರದ ಟೈಟಲ್ ಅನಾವರಣ ಸಮಾರಂಭ ಕಳೆದ ಶನಿವಾರ ನಡೆಯಿತು. ಈ ಸಮಾರಂಭಕ್ಕೆ  ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರು ಸೇರಿದಂತೆ ಚಿತ್ರರಂಗದ ಹಾಗೂ ರಾಜಕೀಯ ವಲಯದ ಹಲವಾರು ಗಣ್ಯರು ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ದೇವ್ರಂಥ ಮನುಷ್ಯ ಎನ್ನುವುದು ಚಿತ್ರದ ಶೀರ್ಷಿಕೆಯಾದರೆ, ಸಂಜೆಮೇಲೆ ಸಿಗ್ಬೇಡಿ ಇದು ಚಿತ್ರದ ಟ್ಯಾಗ್‍ಲೈನ್. ಹೆಚ್.ಸಿ. ಮಂಜುನಾಥ್, ಎಸ್.ಎಂ.ಸುರೇಶ್ ಹಾಗೂ ವೆಂಕಟ್‍ಗೌಡ ಸೇರಿ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.

devaranta-manushya-2
ಕಿರಣ್‍ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಪೂರ್ಣಿಮಾ,ನಯನ ಹಾಗೂ ಖುಷಿ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಏಪ್ರಿಲ್ 3ರಿಂದ ಚಿತ್ರೀಕರಣ ಆರಂಭಿಸಿ ಒಂದೇ ಹಂತದಲ್ಲಿ ಶೂಟಿಂಗ್ ಮುಗಿಸುವ ಪ್ಲಾನ್ ಚಿತ್ರತಂಡಕ್ಕಿದೆ. ನಿರ್ಮಾಪಕರಲ್ಲೊಬ್ಬರಾದ ವೆಂಕಟ್‍ಗೌಡ ಮಾತನಾಡುತ್ತ ಸಖತ್‍ರಿಸ್ಕ್, ಕೇಳದೆ ನಿಮಗೀಗ ನಂತರ ಈ ಚಿತ್ರದ ನಿರ್ಮಾಣಕ್ಕೆ ಕೈಹಾಕಿದ್ದೇನೆ. ಪ್ರಥಮ್‍ಅವರ ಜನಪ್ರಿಯತೆಯನ್ನು ಉಪಯೋಗಿಸಿಕೊಂಡು ಈ ಸಿನಿಮಾ ನಿರ್ಮಿಸುತ್ತಿದ್ದೇವೆ ಎಂದರು. ಮತ್ತೊಬ್ಬ ನಿರ್ಮಾಪಕ ಸುರೇಶ್ ಮಾತನಾಡಿ ಸ್ನೇಹಿತ ವೆಂಕಟ್‍ಗೌಡ ಈ ಸಿನಿಮಾ ಮಾಡಬೇಕೆಂದು ನನ್ನ ಬಳಿ ಬಂದಾಗ ಮಂಜುನಾಥ್ ಹತ್ತಿರ ಮಾತಾಡಿ ಮೂವರೂ ಸೇರಿ ನಿರ್ಮಾಣಕ್ಕೆ ಕೈಹಾಕಿದ್ದೇವೆ.

devaranta-manushya-3

ಸುಮಾರು ಎರಡೂವರೆ ಕೋಟಿ ಬಜೆಟ್ ಅಂದಾಜಿಸಿದ್ದೇವೆ ಎಂದು ಹೇಳಿಕೊಂಡರು. ನಂತರ ಚಿತ್ರದ ನಿರ್ದೇಶಕ ಕಿರಣ್ ಶೆಟ್ಟಿ ಮಾತನಾಡುತ್ತ ಈ ಹಿಂದೆ ಕೆಲ ಡಾಕ್ಯುಮೆಂಟರಿ ಚಿತ್ರಗಳನ್ನು ಮಾಡಿದ್ದೆ. ಬೆಳ್ಳಿತೆರೆಯಲ್ಲಿ ಇದು ಮೊದಲ ಪ್ರಯತ್ನ. ಸ್ನೇಹಿತ ವೆಂಕಟ್ ಮೂಲಕ ಈ ಚಿತ್ರಕ್ಕೆ ಕೆಲಸ ಮಾಡುವ ಅವಕಾಶ ಬಂತು. ಪ್ರಥಮ್‍ರನ್ನು ಈವರೆಗೆ ಜನ ಹೇಗೆ ನೋಡಿದ್ದರೋ ಅದೇ ಥರದ ಪಾತ್ರ ಈ ಚಿತ್ರದಲ್ಲಿರುತ್ತದೆ. ಇಡೀ ಚಿತ್ರ ಎಂಟರ್‍ಟೈನಿಂಗ್ ಆಗಿರುತ್ತದೆ. ಬಿಗ್‍ಬಾಸ್ ಖ್ಯಾತಿಯ ಕೀರ್ತಿ ಕೂಡ ಈ ಚಿತ್ರದಲ್ಲಿ ಗೆಸ್ಟ್ ರೋಲ್ ಮಾಡಲಿದ್ದಾರೆ. ನಯನ, ಖುಷಿ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಎಂಭತ್ತರಷ್ಟು ಭಾಗದ ಚಿತ್ರೀಕರಣವನ್ನು ಬೆಂಗಳೂರಿನಲ್ಲೇ ನಡೆಸಲಾಗುವುದು. ನಂತರ ಮೈಸೂರು ಸುತ್ತಮುತ್ತ ಹಾಗೂ ಮಲೆನಾಡಿನ ಸುಂದರ ಲೊಕೇಶನ್‍ಗಳಲ್ಲಿ ಹಾಡುಗಳನ್ನು ಚಿತ್ರೀಕರಿಸುವ ಪ್ಲಾನ್ ಇದೆ ಎಂದು ಹೇಳಿದರು. ನಾಯಕನಟ ಪ್ರಥಮ್ ಮಾತನಾಡಿ, ಈ ಚಿತ್ರಕ್ಕೂ ಮೊದಲೇ ನಾನು ಮತ್ತೆರಡು ಚಿತ್ರಗಳಿಗೆ ಕಮಿಟ್ ಆಗಿದ್ದೆ. ಕಿರಣ್, ಶೈಲೇಶ್ ಚಿತ್ರಕ್ಕಾಗಿ ತುಂಬಾ ಹಾರ್ಡ್ ವರ್ಕ್ ಮಾಡುತ್ತಿದ್ದಾರೆ, ನಾನ್‍ಸ್ಟಾಪ್ ಕಾಮಿಡಿ, ಫುಲ್ ಎಂಟರ್‍ಟೈನರ್ ಸಿನಿಮಾ ಇದಾಗಲಿದೆ ಎಂದು ಹೇಳಿಕೊಂಡರು.

devaranta-manushya-4

ನಾಯಕಿಯರಲ್ಲೊಬ್ಬರಾದ ನಯನ ಈ ಹಿಂದೆ ಬೆತ್ತನಗೆರೆ, ಊಟಿ ಹಾಗೂ ಕೋಲಾರ ಚಿತ್ರಗಳಲ್ಲಿ ನಟಿಸಿದ್ದು, ಇದು ಅವರ ಅಭಿನಯದ 4ನೇ ಚಿತ್ರವಾಗಿದೆ. ಜಾಲಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಬ್ಬ ನಟಿ ಖುಷಿ ಕೂಡ ಶಿವಲಿಂಗ, ನಾನಿ ಸಿನಿಮಾದ ಚಿಕ್ಕ ಪಾತ್ರಗಳಲ್ಲಿ ಅಲ್ಲದೆ ಪ್ರಚಂಡಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದು, ಇದು ಹೀರೋಯಿನ್ ಆಗಿ ಅವರ 2ನೇ ಚಿತ್ರ. ಮೂರನೇ ನಾಯಕಿ ಪೂರ್ಣಿಮಾ ಕೂಡ ಹಿಂದೆ ದಕ್ಷ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ 5 ಹಾಡುಗಳಿದ್ದು, ರಾಜೇಶ್ ರಾಮನಾಥ್ ಅವರ ಸಂಗೀತ ನಿರ್ದೇಶನವಿದೆ. ಅರುಣ್ ಸುರೇಶ್ ಅವರ ಛಾಯಾಗ್ರಹಣವಿದೆ.ಶೈಲೇಶ್‍ನಾಗ್ ಈ ಚಿತ್ರಕ್ಕೆ ಕಥೆ, ಸಂಭಾಷಣೆ ರಚಿಸಿದ್ದು, ನಿರ್ದೇಶಕ ಕಿರಣ್ ಶೆಟ್ಟಿ ಅವರೇ ಸಂಭಾಷಣೆ ಬರೆದಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin