ಫೇಸ್‍ಬುಕ್, ವಾಟ್ಸಾಪ್ ಸೇರಿ ಸೋಷಿಯಲ್ ಮೀಡಿಯಾಗಳಿಗೆ ಬ್ರೇಕ್ ಹಾಕಲು ಮುಂದಾದ ಕೇಂದ್ರ

ಈ ಸುದ್ದಿಯನ್ನು ಶೇರ್ ಮಾಡಿ

Facebook-And-Whatsapp

ನವದೆಹಲಿ, ಏ.6-ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ವ್ಯಾಟ್ಸ್‍ಆ್ಯಪ್, ಸ್ಕೈಪ್ , ವೀಚಾಟ್ ಮತ್ತು ಗೂಗಲ್ ಟಾಕ್ ಇವುಗಳ ಮೇಲೆ ಕಾನೂನುಬದ್ಧ ನಿಯಂತ್ರಣ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಎಲ್ಲ ಟೆಲಿಕಾಂ ಆಪರೇಟರ್‍ಗಳಿಗೆ ಈಗಿರುವ ನಿಬಂಧನೆ ವ್ಯವಸ್ಥೆಯನ್ನು ಫೇಸ್‍ಬುಕ್, ವ್ಯಾಟ್ಸ್‍ಆ್ಯಪ್, ಸ್ಕೈಪ್ , ವೀಚಾಟ್ ಮತ್ತು ಗೂಗಲ್ ಟಾಕ್‍ನಂಥ ಒವರ್-ದಿ-ಟಾಪ್ (ಒಟಿಟಿ) ಸೇವೆಗಳಿಗೂ ವಿಸ್ತರಿಸಲಾಗುವುದು ಎಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‍ಗೆ ಮಾಹಿತಿ ನೀಡಿದೆ. ಈ ಕುರಿತು ದೂರಸಂಪರ್ಕ ಇಲಾಖೆ (ಡಿಒಟಿ) ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಬಗ್ಗೆ ವಿವರವಾದ ಮಾಹಿತಿ ಸಲ್ಲಿಸಿದೆ.

ಗ್ರಾಹಕರನ್ನು ತಲುಪಲು ಟೆಲಿಕಾಂ ಸರ್ವಿಸ್ ಪ್ರೊವೈಡರ್‍ಗಳ ಜಾಲವನ್ನು ಒಟಿಟಿ ಬಳಸುತ್ತದೆ. ಆ್ಯಪ್ ಆಧಾರಿತ ಉತ್ಪನ್ನಗಳು ಹಾಗೂ ಮೆಸೇಜ್ ಮತ್ತು ಟೆಲಿಫೋನ್ ಸೌಲಭ್ಯಗಳನ್ನು ನೀಡಿ ತೀವ್ರ ಸ್ಪರ್ಧೆ ಒಡ್ಡುತ್ತಿವೆ. ಆದಾಗ್ಯೂ ಇವು ಯಾವುದೇ ನಿಯಂತ್ರಣ-ನಿಬಂಧನೆಗೆ ಒಳಪಟ್ಟಿಲ್ಲ. ಹೀಗಾಗಿ ಇಂಥ ಸೋಷಿಯಲ್ ನೆಟ್‍ವರ್ಕ್ ಮೇಲೆ ನಿಬಂಧನೆ ವಿಧಿಸುವುದು ಅಗತ್ಯ ಎಂದು ಟೆಲಿಕಾಂ ಇಲಾಖೆ ವಾದಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin